ನವದೆಹಲಿ: 2021ರಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಗೆ ಗುಂಡಿಕ್ಕಿ ಗಾಯಗೊಳಿಸಿದ ಘಟನೆ ದೆಹಲಿಯ ಭಜನ್ಪುರ ಪ್ರದೇಶದಲ್ಲಿ ನಡೆದಿದೆ.
ಈಶಾನ್ಯ ದೆಹಲಿಯ ಉತ್ತರ ಘೋಂಡಾ ಪ್ರದೇಶದಲ್ಲಿ 5:30 ರ ಸುಮಾರಿಗೆ ಘಟನೆ ನಡೆದಿದೆ. ಈ 50 ವರ್ಷದ ಮಹಿಳೆಯ ಮಗ 2 ವರ್ಷಗಳ ಹಿಂದೆ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಇದರಿಂದ ನೊಂದಿದ್ದ ಬಾಲಕಿ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆಯನ್ನು ಸುಭಾಷ್ ಮೊಹಲ್ಲಾ ನಿವಾಸಿ ಖುರ್ಷಿದಾ ಎಂದು ಗುರುತಿಸಲಾಗಿದೆ. ಖುರ್ಷಿದಾ ದಿನಸಿ ಅಂಗಡಿ ನಡೆಸುತ್ತಿದ್ದು, ಅತ್ಯಾಚಾರದ ಆರೋಪಿಯಾಗಿರುವ ಆಕೆಯ ಮಗ ನಾಪತ್ತೆಯಾಗಿದ್ದಾನೆ. ಮಹಿಳೆಯನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಬಾಲಕಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.