ಮಂಗಳೂರು : ರಾಜ್ಯದಲ್ಲಿ ಸುಮಾರು 15 ಸ್ಲೀಪರ್ ಸೆಲ್ ಸಕ್ರಿಯವಾಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಈಗಾಗಲೇ ಭಾಗಿಯಾದವರನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Rain in Karnataka : ರಾಜ್ಯದಲ್ಲಿ ಚಳಿಯ ಜೊತೆಗೆ ಮಳೆಯೂ ಹೆಚ್ಚಳ : ಇಂದು 10 ಜಿಲ್ಲೆಗಳಲ್ಲಿ `ಯಲ್ಲೋ ಅಲರ್ಟ್’ ಘೋಷಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಗ್ರ ಚಟುವಟಿಕೆಯನ್ನು ದಮನಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಲೀಪರ್ ಸೆಲ್ ಗಳಲ್ಲಿ ಸಕ್ರಿಯವಾಗಿದ್ದವರಲ್ಲಿ ಕೆಲವರು ತಿಹಾರ್ ಜೈಲು ಸೇರಿದಂತೆ ಬೇರೆ ಬೇರೆ ಜೈಲುಗಳಲ್ಲಿದ್ದಾರೆ. ಉಗ್ರ ಚಟುವಟಿಕೆಯ ಲಿಂಕ್ ಗಳು, ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.
ಉಗ್ರರ ಚಟುವಟಿಕೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಒಟ್ಟಿಗೆ ಕೆಲಸ ಮಾಡುತ್ತಿದ್ದು, ಸ್ಲೀಪರ್ ಸೆಲ್ ನಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಲಾಗಿದೆ ಎಂದರು.
BIGG NEWS : ಬೆಂಗಳೂರಿನಲ್ಲಿ ಇಂದು ನಿಗದಿಯಾಗಿದ್ದ ಬಿಜೆಪಿ `ಜನಸಂಕಲ್ಪ’ ಸಮಾವೇಶ ಮುಂದೂಡಿಕೆ