ಬೆಂಗಳೂರು : ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 15 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ವಿವಿಧ ಕಾರಣಗಳಿಂದಾಗಿ ಮುಚ್ಚಿದ್ದು,ಇದರಿಂದ 2,096 ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದ್ದಾರೆ.
Good News : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಅಕ್ಟೋಬರ್ 2 ರಿಂದ ಜಾರಿ `ಯಶಸ್ವಿನಿ ಯೋಜನೆ’ ಮರುಜಾರಿ
ವಿಧಾನಪರಿಷತ್ ನಲ್ಲಿ ಜೆಡಿಎಸ್ ನ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಕಳೆದ 3 ವರ್ಷಗಳಲ್ಲಿ 15 ಕೈಗಾರಿಕೆಗಳು ಬಂದ್ ಆಗಿದ್ದು, 2,096 ಮಂದಿ ನೌಕರಿ ಕಳೆದುಕೊಂಡಿದ್ದಾರೆ. ಕೈಗಾರಿಕೆಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
BIGG NEWS : `APMC’ ತಿದ್ದುಪಡಿ ಕಾಯ್ದೆ ವಾಪಸಿಲ್ಲ : ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ
ಇನ್ನು ಕೈಗಾರಿಕೆ ನಡೆಸಲು ಆಗದಿದ್ದರೆ ಅಂತಹ ಕೈಗಾರಿಕೆಗಳನ್ನು ಬೇರೆಯವರಿಗೆ ಮಾರಲು ಅವಕಾಶ ನೀಡಲಾಗಿದ್ದು, ಈ ಮೂಲಕ ಕೈಗಾರಿಕೆಗಳ ಚಟುವಟಿಕೆಗಳು ಮುಂದುವರೆಯಲಿವೆ ಎಂದು ಹೇಳಿದ್ದಾರೆ.