ಬೆಂಗಳೂರು: ರಾಜ್ಯದಲ್ಲಿ ಈ ಹಿಂದಿನ ಎಲ್ಲಾ ದಾಖಲೆ ಮುರಿಯುವಂತೆ ಕೋವಿಡ್ ಸೋಂಕಿನ ( Covid19 Case ) ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಬರೋಬ್ಬರಿ 1,374 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ ಮೂವರು ಸಾವನ್ನಪ್ಪಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯಿಂದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬಾಗಲಕೋಟೆ 03, ಬಳ್ಳಾರಿ 12, ಬೆಳಗಾವಿ 07, ಬೆಂಗಳೂರು ಗ್ರಾಮಾಂತರ 06, ಬೆಂಗಳೂರು ನಗರ 1234, ಚಿತ್ರದುರ್ಗ -02, ದಕ್ಷಿಣ ಕನ್ನಡ -19, ದಾವಣಗೆರೆ – 02, ಧಾರವಾಡ -33 ಕೋವಿಡ್ ಪ್ರಕರಣ ( Coronavirus Case ) ವರದಿಯಾಗಿದೆ.
ಇಂದು ‘ಬೆಸ್ಕಾಂ ವ್ಯಾಪ್ತಿ’ಯ 8 ಜಿಲ್ಲೆಗಳಲ್ಲಿ ‘ವಿದ್ಯುತ್ ಅದಾಲತ್’: 2900 ಗ್ರಾಹಕರು ಭಾಗಿ
ಗದಗ 01, ಹಾಸನ 08, ಕಲಬುರ್ಗಿ 09, ಕೋಲಾರ 07, ಕೊಪ್ಪಳ 01, ಮಂಡ್ಯ 02, ಮೈಸೂರು 22, ತುಮಕೂರು 01 ಮತ್ತು ಉಡುಪಿ 05 ಸೇರಿದಂತೆ 1,374 ಮಂದಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 39,85,376ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 777 ಸೇರಿದಂತೆ ಈವರೆಗೆ 39,37,950 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈಗ 7,296 ಸಕ್ರೀಯ ಸೋಂಕಿತರಿದ್ದಾರೆ ಎಂದು ತಿಳಿಸಿದೆ.
ಇನ್ನೂ ಇಂದು ಬಳ್ಳಾರಿ 01, ಬೆಂಗಳೂರು ನಗರ ಇಬ್ಬರು ಸೇರಿದಂತೆ ಮೂವರು ಸೋಂಕಿತರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 40,088ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.
ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ – CM ಬಸವರಾಜ ಬೊಮ್ಮಾಯಿ