ಬೆಂಗಳೂರು: ಕೆಲ ದಿನಗಳ ಹಿಂದೆ 108 ಆಂಬುಲೆನ್ಸ್ ಸೇವೆಯ ( 108 Ambulance Service ) ಸರ್ವರ್ ಸಮಸ್ಯೆಯಿಂದಾಗಿ ರಾಜ್ಯಾಧ್ಯಂತ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ರೋಗಿಗಳಿಗೆ ಸೂಕ್ತ ಕಾಲದಲ್ಲಿ ಆಂಬುಲೆನ್ಸ್ ಸೇವೆ ಸಿಗದೇ ಕಷ್ಟ ಅನುಭವಿಸುವಂತೆ ಆಗಿತ್ತು. ಇದೀಗ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ನಾಳೆಯಿಂದ ಆಂಬುಲೆನ್ಸ್ ನೌಕರರು ( Ambulance employee ) ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ನಾಳೆಯಿಂದ ರಾಜ್ಯಾಧ್ಯಂತ ಆಂಬುಲೆನ್ಸ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ ‘ಫೋರ್ಟಿಸ್ ಆಸ್ಪತ್ರೆ’
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿರುವಂತ 108 ಆಂಬುಲೆನ್ಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ ಅವರು, ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಆಂಬುಲೆನ್ಸ್ ಸೇವೆ ಒದಗಿಸುತ್ತಿರುವಂತ ಜಿವಿಕೆ ವೇತನವನ್ನು ಬಾಕಿ ಉಳಿಸಿಕೊಂಡಿದೆ. ವೇತನವಿಲ್ಲದೇ ನೌಕರರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಈ ಹಿಂದೆ ಅನೇಕ ಬಾರಿ ವೇತನ ಬಿಡುಗಡೆಗೆ ಕೋರಿದ್ದರೂ ನೀಡಿಲ್ಲ. ಈ ಹಿನ್ನಲೆಯಲ್ಲಿ ನಾಳೆ ಸಂಜೆಯೊಳಗೆ ಸಂಬಳ ನೀಡದೇ ಇದ್ದರೇ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸೋದಾಗಿ ಎಚ್ಚರಿಸಿದ್ದಾರೆ.
‘ಟಿಕೆಟ್ ನೀಡದಿದ್ದರೂ, ಕಾರ್ಯಕರ್ತನಾಗಿ ನಿಷ್ಠೆಯಿಂದ ಪಕ್ಷಕ್ಕೆ ದುಡಿಯುತ್ತೇನೆ’ : ಮಾಜಿ ಸಚಿವ K.S ಈಶ್ವರಪ್ಪ
ನಮಗೆ ಬಾಕಿ ವೇತನ ನೀಡಬೇಕು. ಗುರುವಾರದ ಒಳಗೆ ನೀಡದೇ ಇದ್ದರೇ ರಾಜ್ಯಾಧ್ಯಂತ ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಆಂಬುಲೆನ್ಸ್ ಸೇವೆ ಸ್ಥಗಿತದಿಂದ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾದರೇ ಅದಕ್ಕೆ ಜಿವಿಕೆ ಸಂಸ್ಥೆಯೇ ನೇರ ಕಾರಣ ಎಂಬುದಾಗಿ ಹೇಳಿದರು.
ಮತ್ತೊಂದೆಡೆ ಮುಷ್ಕರ, ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವಂತ ಎಚ್ಚರಿಕೆ ನೀಡಿರುವಂತ ನೌಕರರೊಂದಿಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಮುಂದುವರೆಸಿಕೊಂಡು ಹೋಗುವಂತೆ, ಬಾಕಿ ವೇತನ ಬಿಡುಗಡೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.