ತುಮಕೂರು: ಕಳೆದ ಎರಡು ತಿಂಗಳಿನಿಂದ ವೇತನ ಆಗಿಲ್ಲ. ನಾಳೆ ಸಂಜೆವೇಳೆಗೆ ಆಗದೇ ಹೋದರೇ ರಾಜ್ಯಾಧ್ಯಂತ 108 ಆಂಬುಲೆನ್ಸ್ ಸೇವೆಯನ್ನು ( 108 Ambulance Service ) ಸ್ಥಗಿತಗೊಳಿಸೋದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ 108 ಸಿಬ್ಬಂದಿಗಳಿಗೆ ವೇತನ ಕೊಡಿಸುವ ಜವಾಬ್ದಾರಿ ನಮ್ಮ ಸರ್ಕಾರದ್ದು ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಹೇಳಿದ್ದಾರೆ.
ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ ‘ಫೋರ್ಟಿಸ್ ಆಸ್ಪತ್ರೆ’
ನಗರದಲ್ಲಿ ಇಂದು ಆಂಬುಲೆನ್ಸ್ ನೌಕರರ ಧರಣಿ ವಿಚಾರವಾಗಿ ಮಾತನಾಡಿದಂತ ಅವರು, ಜಿವಿಕೆ ಸಂಸ್ಥೆಯಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. ಡಿಸೆಂಬರ್ ಬಳಿಕ ಹೊಸ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ. ಸಿಬ್ಬಂದಿಗೆ ಸಮಸ್ಯೆ ಆಗದಂತೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಡಿಸೆಂಬರ್ ವರೆಗೂ ಕೆಲಸ ಮಾಡುವಂತೆ ಸಿಬ್ಬಂದಿಗಳನ್ನು ಮನವೊಲಿಕೆ ಪ್ರಯತ್ನ ಮಾಡಲಾಗುತ್ತಿದೆ ಎಂದರು.
‘ಟಿಕೆಟ್ ನೀಡದಿದ್ದರೂ, ಕಾರ್ಯಕರ್ತನಾಗಿ ನಿಷ್ಠೆಯಿಂದ ಪಕ್ಷಕ್ಕೆ ದುಡಿಯುತ್ತೇನೆ’ : ಮಾಜಿ ಸಚಿವ K.S ಈಶ್ವರಪ್ಪ
ಡಿಸೆಂಬರ್ ಬಳಿಕ ಜಿವಿಕೆ ಸಂಸ್ಥೆ ಬಿಟ್ಟು ಬೇರೊಂದು ಸಂಸ್ಥೆಗೆ ಆಂಬುಲೆನ್ಸ್ ಗುತ್ತಿಗೆ ನೀಡಲಾಗುತ್ತದೆ. ಈಗ ಬಾಕಿ ಉಳಿದಿರುವಂತ ವೇತನ ಕೊಡಿಸುವಂತ ಜವಾಬ್ದಾರಿ ಕೂಡ ನಮ್ಮ ಸರ್ಕಾರದ್ದು. ಧರಣಿ ನಡೆಸದೇ ಕರ್ತವ್ಯ ನಿರ್ವಹಿಸುವಂತೆ ಆಂಬುಲೆನ್ಸ್ ಸಿಬ್ಬಂದಿಗಳಿಗೆ ಮನವಿ ಮಾಡಿದರು.
ಬೆಂಗಳೂರು ತಂತ್ರಜ್ಞಾನ ಸಮಾವೇಶ: ಎಲೆಕ್ಟ್ರಾನಿಕ್ ವಲಯದಲ್ಲಿ 36 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ