ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಆರ್ಥಿಕ ನಷ್ಟದ ಕಾರಣವೊಡ್ಡಿ ಮೈಕ್ರೋಸಾಫ್ಟ್ ಕಂಪನಿ ಸುಮಾರು 1,000 ಜನರನ್ನು ಕೆಲಸದಿಂದ ತೆಗೆದುಹಾಕಿದೆ .
ಜಗತ್ತಿನ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 1ರಷ್ಟು ಮಂದಿಯನ್ನು ವಜಾ ಮಾಡಿದಂತಾಗಿದೆ. ಈ ಹಿಂದಿನ ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ನಲ್ಲಿ 2,21,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿತ್ತು.
“ಇಂದು ನಾವು ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಮಾತ್ರ ವಜಾ ಮಾಡಿದ್ದೇವೆ . ಎಲ್ಲಾ ಕಂಪನಿಗಳಂತೆ, ನಾವು ನಮ್ಮ ವ್ಯಾಪಾರ ಆದ್ಯತೆಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುತ್ತೇವೆ, ಮತ್ತು ರಚನಾತ್ಮಕ ಹೊಂದಾಣಿಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಕಂಪನಿ ತಿಳಿಸಿದೆ.
ಮೈಕ್ರೋಸಾಫ್ಟ್ ಮತ್ತು ಮೆಟಾದಂತಹ ಬಿಗ್ ಟೆಕ್ ಸಂಸ್ಥೆಗಳಾದ್ಯಂತ ಯುಎಸ್ ಟೆಕ್ ವಲಯದ 32,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಜುಲೈ ಅಂತ್ಯದವರೆಗೆ ಸಾಮೂಹಿಕ ಉದ್ಯೋಗ ಕಡಿತದಲ್ಲಿ ವಜಾಗೊಳಿಸಲಾಗಿದೆ.