ಶಿವಮೊಗ್ಗ: ಗೋವುಗಳ ರಕ್ಷಣೆಗೆ ಸರ್ಕಾರಿ ನೌಕರರ ಸಂಘದಿಂದ 100 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಹಲವಾರು ಯೋಜನೆಗಳು ಜಾರಿ ಮಾಡಲಾಗಿದೆ. ಗೋಮಾತೆ ಕಸಾಯಿಖಾನೆಗೆ ಹೋಗಬಾರದೆಂಬ ಉದ್ದೇಶದಿಂದ ಪುಣ್ಯದತ್ತು ಯೋಜನೆ ಜಾರಿಯಾಗಿದೆ.
ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಲಾಗಿದೆ. 100 ಸರ್ಕಾರಿ ಗೋಶಾಲೆ ಆರಂಭಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿಸೆಂಬರ್ ತಿಂಗಳೊಳಗೆ 30 ಗೋಶಾಲೆ ಆರಂಭಿಸುವುದಾಗಿ ಪ್ರಭು ಚೌಹಾಣ್ ತಿಳಿಸಿದರು.
ಚರ್ಮಗಂಟು ರೋಗ ಲಸಿಕೆಗೆ ಸರ್ಕಾರದಿಂದ 13 ಕೋಟಿ ಬಿಡುಗಡೆ
ರಾಜ್ಯದಲ್ಲಿ ಗೋವುಗಳ ರಕ್ಷಣೆಗೆ ಸಹಾಯವಾಣಿ ಆರಂಭಿಸಲಾಗಿದೆ. ಬೆಂಗಳೂರು, ಬೆಳಗಾವಿ ವಿಭಾಗದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಸಹಾಯವಾಣಿ, ಆ್ಯಂಬುಲೆನ್ಸ್ ವ್ಯವಸ್ಥೆ ಮತ್ತು ಜಾನುವಾರು ಚರ್ಮಗಂಟು ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಲಸಿಕೆಗಾಗಿ ಸರ್ಕಾರದಿಂದ 13 ಕೋಟಿ ಬಿಡುಗಡೆ ಆಗಿದೆ. ಚರ್ಮಗಂಟು ರೋಗದಿಂದ ಶೇ. 50ರಷ್ಟು ಗೋವುಗಳು ಗುಣಮುಖವಾಗಿವೆ. ರಾಜ್ಯದಲ್ಲಿ 400 ಪಶು ವೈದ್ಯರ ನೇಮಕಾತಿಗೆ ಆದೇಶ ನೀಡಲಾಗಿದೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದರು.
BIGG NEWS : ಕಣ್ಣು ತೆರೆದು ಪವಾಡ ಸೃಷ್ಟಿಸಿದ ‘ಶಿವಲಿಂಗ’ : ‘ವಿಸ್ಮಯ’ ನೋಡಲು ಮುಗಿಬಿದ್ದ ಭಕ್ತರು..!
JOB ALERT : ‘SSLC’ ಪಾಸಾದವರಿಗೆ ಸರ್ಕಾರಿ ಉದ್ಯೋಗವಕಾಶ : ಇಲ್ಲಿದೆ ಮಾಹಿತಿ