ಹಾವೇರಿ: ಸಂಬಂಧಿಕರ ಮನೆಗೆ ತೆರಳೋದಕ್ಕೆ ಹೋಗಿದ್ದಂತ ರೈತನೊಬ್ಬ ಮಾರ್ಗಮಧ್ಯೆ ಸಿಕ್ಕಂತ ನದಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ನದಿ ನೀರಿನಲ್ಲಿ ಕೊಚ್ಚಿಹೋಗಿದ್ದನು. 1 ಕಿಲೋಮೀಟರ್ ದೂರ ಕೊಚ್ಚಿ ಹೋಗಿದ್ದಂತ ರೈತ ಮಾತ್ರ, ಪವಾಡ ಸಾದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದಾನೆ. ಅದೇಗೆ ಎನ್ನುವ ಬಗ್ಗೆ ಮುಂದೆ ಓದಿ..
ಸಾರ್ವಜನಿಕರೇ ಎಚ್ಚರ ; ವಾಟ್ಸಾಪ್ನಲ್ಲಿ ‘ಬಿಲ್ ಕ್ಲಿಯರ್ ಮಾಡಿ’ ಅಂತಾ ಮೆಸೇಜ್ ಬಂದ್ರೆ ಹುಷಾರು.!
ಹಾವೇರಿ ಜಿಲ್ಲೆಯ ಯರಗೋಡ ಬಳಿಯ ಕುಮುದ್ವತಿ ನದಿಯನ್ನು ದಾಟಿ, ಸಂಬಂಧಿಕರ ಮನೆಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ರೈತ ಹಾಲಪ್ಪ ಕೆಳಗಿನಮನಿ ನದಿಯಲ್ಲಿ ರಾತ್ರಿ 9 ಗಂಟೆಯ ಹಾಗೆ 1 ಕಿಲೋಮೀಟರ್ ದೂರ ಕೊಚ್ಚಿ ಹೋಗಿದ್ದರು. ಹೀಗೆ ಕೊಚ್ಚಿಹೋಗಿದ್ದಂತ ಅವರು, ಗಿಡಗೆಂಟೆಗಳನ್ನು ಹಿಡಿದು, ಕೊನೆಗೆ ನದಿಯ ಮಧ್ಯದಲ್ಲಿಯೇ ಸಿಕ್ಕಂತ ದಂಡೆಯ ಮೇಲೆ ಇಡೀ ರಾತ್ರಿ ಕಳೆದಿದ್ದರು.
BIGG NEWS : ಚುನಾವಣಾ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಬೆಳಗಾಗುತ್ತಿದ್ದಂತೆ ದಾರಿ ಹೋಕರನ್ನು ಅವರನ್ನು ಕಂಡು ನದಿಯ ಮಧ್ಯದಲ್ಲಿದ್ದಂತ ಅವರನ್ನು ರಕ್ಷಿಸೋದಕ್ಕೆ ಧಾವಿಸುವಂತೆ ಮನವಿ ಮಾಡಿದ್ದರು. ಸ್ಥಳೀಯರ ಮಾಹಿತಿಯ ಮೇರೆಗೆ ಹಿರೆಕೆರೂರು ಠಾಣೆಯ ಪೊಲೀಸರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರೈತ ಹಾಲಪ್ಪ ಕೆಳಗಿನಮನಿಯನ್ನು ರಕ್ಷಿಸಿದ್ದಾರೆ.
ಸಾರ್ವಜನಿಕರೇ ಎಚ್ಚರ ; ವಾಟ್ಸಾಪ್ನಲ್ಲಿ ‘ಬಿಲ್ ಕ್ಲಿಯರ್ ಮಾಡಿ’ ಅಂತಾ ಮೆಸೇಜ್ ಬಂದ್ರೆ ಹುಷಾರು.!
ರಾತ್ರಿ 9 ಗಂಟೆಯಿಂದ ಊಟವಿಲ್ಲದೇ ಅಸ್ವಸ್ಥಗೊಂಡಿದ್ದಂತ ರೈತನನ್ನು ರಕ್ಷಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಈ ಮೂಲಕ ನದಿಯಲ್ಲಿ ಕೊಚ್ಚಿ ಹೋಗಿದ್ದಂತ ರೈತ ಪವಾಡ ಸಾದೃಶ್ಯ ರೀತಿಯಲ್ಲಿ ಬದುಕಿ ಬರುವಂತೆ ಆಗಿದೆ.