ಶಿವಮೊಗ್ಗ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ದುಷ್ಕರ್ಮಿಗಳು ಕುಡಗೋಲಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹೊರವಲಯದ ದುಮ್ಮಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಅದೇ ಗ್ರಾಮದ ಸತೀಶ್ ನಾಯ್ಕ (28) ಎಂದು ಹೇಳಲಾಗುತ್ತಿದೆ. ಕೊಲೆಯಾದ ಸತೀಶ್ ನಾಯಕ್ ಅವರ ತಂದೆಗೆ ಸೇರಿದ ಮೂರುವರೆ ಎಕರೆ ಭೂಮಿ ಇತ್ತು. ಈ ಒಂದು ಜಮೀನಿಗೆ ಸಂಬಂಧಿಸಿದಂತೆ ಮಂಜ ನಾಯಕ್ ಹಾಗೂ ಸತೀಶ್ ಕುಟುಂಬಗಳ ನಡುವೆ ಕೋರ್ಟ್ ನಲ್ಲಿ ವಿವಾದ ನಡೆಯುತ್ತಿತ್ತು. ಕೋರ್ಟ್ ವಿವಾದ ಬಗೆಹರಿಯುವ ತನಕ ಎರಡು ಕಡೆಯವರು ಸಹ ಜಮೀನಿಗೆ ಹೋಗಬಾರದು ಎಂದು ನ್ಯಾಯಾಲಯ ತಿಳಿಸಿತ್ತು.
ಅಕಸ್ಮಾತ್ ಎರಡು ಕುಟುಂಬದವರ ಪೈಕಿ ಯಾರಾದರೂ ಜಮೀನಿಗೆ ಹೋದರೆ ಜಮೀನಿಗೆ ಹೋದ ಫೋಟೋ ಹಾಗೂ ವಿಡಿಯೋವನ್ನು ಸಾಕ್ಷಿ ಸಮೇತ ನೀಡಬೇಕು ಎಂದು ನ್ಯಾಯಾಲಯ ತಿಳಿಸಿತ್ತು. ಅದರಂತೆ ಇಂದು ಮಂಜ ನಾಯಕನ ಮಕ್ಕಳು ಜಮೀನಿಗೆ ತಿಳಿದಿದ್ದಾರೆ ಇದನ್ನು ಪ್ರಶ್ನಿಸಿದ ಸತೀಶ್ ನಾಯಕರ ಮೇಲೆ ಮಂಜನಾಯಕ್ ಮಗ ಅಖಿಲೇಶ್ ಕೊಡಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಇತ್ತ ಮೃತ ಸತೀಶ್ ನಾಯ್ಕನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಸತೀಶ್ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.