ಚಿಕ್ಕಮಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ಹಣ ಅಕ್ರಮ ವರ್ಗಾವಣೆ ಪ್ರಕರಣ ತನಿಖೆಯಲ್ಲಿ ಇರುವಾಗಲೇ, ಇದೀಗ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ.ಆರ್.ಎಫ್.ಓ. ಅಧಿಕಾರಿ ಒಬ್ಬ ರಾಣಿಝರಿ, ಬಂಡಾಜೆ ಫಾಲ್ಸ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ವಂಚಿಸಿ, ಸರ್ಕಾರಕ್ಕೆ ಬರುವ ಲಕ್ಷಾಂತರ ರೂಪಾಯಿಯನ್ನು ಆತನ ಪ್ರಿಯತಮೆಯ ಖಾತೆಗೆ ವರ್ಗಾಯಿಸಿರುವ ಘಟನೆ ನಡೆದಿದೆ.
ಹೌದು ಡಿ.ಆರ್.ಎಫ್.ಓ. ಚಂದನ್ ಗೌಡಎನ್ನುವ ಅಧಿಕಾರಿ ಸರ್ಕಾರದ ಹಣವನ್ನು ಪ್ರಿಯತಮೆ ಖಾತೆಗೆ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನಲ್ಲಿ ನಡೆದಿದೆ.9000 ಹಣವನ್ನು ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತಾಗಿದ್ದು, 9 ಸಾವಿರ ರೂ. ಸರ್ಕಾರದ ಹಣವನ್ನು ಪ್ರಿಯತಮೆ ಖಾತೆಗೆ ವರ್ಗಾವಣೆಯಾಗಿದೆ.
ಬಂಡಾಜೆ ಫಾಲ್ಸ್ ಬಳಿ 200ಕ್ಕೂ ಅಧಿಕ ಜನರು ಬಂಡಾಜೆ ಫಾಲ್ಸ್ ನೋಡಲು ತೆರಳಿದ್ದರು.ಮಧ್ಯೆ ಚೆಕ್ ಮಾಡಲು ಹೋಗಿದ್ದ ಪೊಲೀಸರಿಗೆ ಪ್ರವಾಸಿಗರು ಸಿಕ್ಕಿ ಬಿದ್ದಿದ್ದಾರೆ. ವಿಚಾರಣೆ ಮಾಡಿದಾಗ ಜೂನ್ ತಿಂಗಳ ಆನ್ಲೈನ್ ಟಿಕೆಟ್ ಬುಕ್ಕಿಂಗ್, ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ತಾಳೆ ಆಗುತ್ತಿರಲಿಲ್ಲ. ಪೊಲೀಸರು ಪ್ರವಾಸಿಗರನ್ನು ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅವರನ್ನು ಅಮಾನತು ಮಾಡುವಂತೆ ಕೊಪ್ಪ ಡಿ.ಎಫ್.ಓ. ಉಪೇಂದ್ರ ಪ್ರತಾಪ್ ಸಿಂಗ್ ಆದೇಶಿಸಿದ್ದಾರೆ.ಆನ್ಲೈನ್ ಟಿಕೆಟ್ ಫೋರ್ಜರಿ ಮಾಡುವ ಮೂಲಕ ಈ ಹಣವನ್ನು ವಂಚನೆ ಮಾಡಲಾಗಿದೆ. ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ ಮಾಲ್ ಮಾಡಿರುವುದು ಬೆಳಕಿಗೆ ಬಂದಿದೆ.ಈಗ ಇಲಾಖೆ ವಿಚಾರಣೆ ನಡೆಸುತ್ತಿದೆ. ಇಲಾಖೆಯ ಲಕ್ಷಗಟ್ಟಲೇ ಹಣ ಮೋನಿಕಾ ಎಂಬ ಯುವತಿಯ ಖಾತೆಗೆ ಜಮಾ ಆಗಿರುವ ಕುರಿತು ಅನುಮಾನ ವ್ಯಕ್ತವಾಗಿದೆ.