ಬೆಂಗಳೂರು : ವಕ್ಫ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದು, ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದಿದ್ದೀರಿ ಎಂದು ಸಂಭ್ರಮ ಪಡುತ್ತಿದ್ದೀರಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ರೈತರಿಗೆ ತೊಂದರೆ ಕೊಟ್ಟರೆ ರಸ್ತೆಯಲ್ಲಿ ಓಡಾಡದಂತೆ ಹೋರಾಟ ರೂಪಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಕುರಿತು ಶಾಸಕ ಗವಿಯಪ್ಪ ಅಪಸ್ವರದ ವಿಚಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೂಟಾಟಿಕೆ ನಾಟಕ ಮಾಡುತ್ತಿದ್ದಾರೆ. ಕೊಟ್ಟಿರುವ ಭರವಸೆ ಈಡೇರಿಸಲು ಆಗುತ್ತಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ. ಇವರ ಯೋಗ್ಯತೆಗೆ ಸರ್ಕಾರ ಬಂದಾಗಿನಿಂದ ಹೊಸ ಯೋಜನೆ ಕೊಟ್ಟಿಲ್ಲ. ಮೂರೂ ಕ್ಷೇತ್ರಗಳ ಉಪಚುನಾವಣೆ ಗೆದ್ದಿದ್ದಾರೆ ಸಂತಸ ಪಡಲಿ, ಸಂಭ್ರಮ ಮಾಡಲಿ.
ಸಂಭ್ರಮದಲ್ಲಿ ರೈತರಿಗೆ ತೊಂದರೆ ಕೊಟ್ಟರೆ ಬೀದಿಗೆ ಇಳಿಯುತ್ತೇವೆ. ಎಂದು ಎಚ್ಚರಿಕೆ ನೀಡಿದರು. ಸಿಎಂ ಹಾಗೂ ಸಚಿವರು ಬೀದಿಯಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ ಆ ರೀತಿ ನಾವು ಹೋರಾಟ ರೂಪಿಸುತ್ತೇವೆ ಬಡವರಿಗೆ ಮೀಸಲಿಟ್ಟ ಸೈಟ್ಗಳನ್ನು ಸರ್ಕಾರ ದೋಚಿದೆ. ಬಡವರ ಸೈಟ್ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ದೋಚಿದೆ. ಯಾವುದೇ ವರ್ಗದ ಜನರಿಗೂ ನ್ಯಾಯ ಸಿಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.