ಸುಳ್ಯ : ತನ್ನ ಬೈಕಿಗೆ ಪೆಟ್ರೋಲ್ ಹಾಕಲು ಬಂದ ಸವಾರನೊಬ್ಬ 210 ರೂಪಾಯಿ ಪೆಟ್ರೋಲ್ ಹಾಕಲು ಹೇಳಿ ಬರೇ 10 ರೂ. ಗೂಗಲ್ ಪೇ ಮಾಡಿ ಸವಾರ ಪರಾರಿಯಾದ ಘಟನೆ ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದಿದೆ. ಜಾಲ್ಸೂರಿನ ಪೆಟ್ರೋಲ್ ಬಂಕ್ ನಲ್ಲಿ ಜನವರಿ 5 ರಂದು ರಾತ್ರಿ ಈ ಘಟನೆ ಸಂಭವಿಸಿದೆ.
ಬೈಕಿಗೆ ಪೆಟ್ರೋಲ್ ಹಾಕಲು ಬಂದ ವ್ಯಕ್ತಿ ಪಂಪ್ ಸಿಬ್ಬಂದಿಯಲ್ಲಿ 210 ರೂ. ಪೆಟ್ರೋಲ್ ಹಾಕಲು ಹೇಳಿದ್ದಾನೆ. ಪಂಪ್ ಸಿಬ್ಬಂದಿ 210 ರೂಪಾಯಿಯ ಪೆಟ್ರೋಲ್ ಹಾಕಿದಾಗ ಆ ವ್ಯಕ್ತಿ ತಾನು ಹಣವನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ ಮಾಡುವುದಾಗಿ ತಿಳಿಸಿದ ಮೇರೆಗೆ ಪಂಪ್ ಸಿಬ್ಬಂದಿ ಸ್ಕ್ಯಾನರ್ ತೋರಿಸಿದ್ದಾರೆ. ಆ ವ್ಯಕ್ತಿ ಬರೇ 10 ರೂ. ಪೇ.ಮಾಡಿದ್ದು, ಆ ವ್ಯಕ್ತಿ ಹಣ ವರ್ಗಾವಣೆ ಮಾಡಿದ್ದು ಸಕ್ಸಸ್ ಎಂದು ಬಂದದ್ದನ್ನು ತನ್ನ ಮೊಬೈಲ್ ನಲ್ಲಿ ಪಂಪ್ ಸಿಬ್ಬಂದಿಗೆ ತೋರಿಸಿದ್ದು ಹಣ ಬಂದಿರಬಹುದೆಂದು ಪಂಪ್ ಸಿಬ್ಬಂದಿ ಭಾವಿಸಿದ್ದಾರೆ. ಆದ್ರೆ ಪರಿಶೀಲಿಸಿದಾಗ ಕೇವಲ 10 ರೂ. ಮಾತ್ರ ಬಂದಿದ್ದು 200 ರೂಪಾಯಿ ಪಂಗನಾಮದೊಂದಿಗೆ ಸವಾರ ಕಾಲಿತ್ತಿದ್ದಾನೆಯಾಗಿದೆ.