ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲರೂ ಒಂದಲ್ಲ ಒಂದು ರೀತಿಯ ಹರಸಾಹಸ ಪಡುವುದು ಸಹಜವಾದುದು. ಚಳಿಗಾಲ ಶುರುವಾಗಿದ್ದು, ಬದಲಾಗುತ್ತಿರುವ ಹವಾಮಾನದಲ್ಲಿ ಅನೇಕ ಜನರು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ನೀವು ಮನೆಯ ಸುತ್ತ ಮುತ್ತ ಸಿಗುವ ಕೆಲವೊಂದು ವಸ್ತುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಕಂಡುಬಂದರೆ ತುಳಸಿ ನೀರನ್ನು ಕುಡಿಯಬಹುದು.ಇದು ಬದಲಾಗುತ್ತಿರುವ ಹವಾಮಾನದಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ತುಳಸಿಯ ನೀರನ್ನು ಸೇವಿಸಿದರೆ ಮೊಣಕಾಲು ನೋವಿನಿಂದ ಪರಿಹಾರ ಕಂಡುಕೊಳ್ಳಬಹುದು. ಅಷ್ಟೆ ಅಲ್ಲದೇ, ಒತ್ತಡವನ್ನು ಕಡಿಮೆ ಮಾಡಲು ತುಳಸಿ ನೀರನ್ನು ಕುಡಿಯಬಹುದು. ಅಸಿಡಿಟಿಯ ಸಮಸ್ಯೆ ಇಲ್ಲವೇ ಹೊಟ್ಟೆ ಸಂಬಂಧಿ ಸಮಸ್ಯೆಗಳಿದ್ದರೆ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿದು ಪರಿಹಾರ ಪಡೆಯಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತುಳಸಿ ನೀರು ಉಪಕಾರಿಯಾಗಿದೆ. ಮುಖದ ಮೇಲಿನ ಕಲೆಗಳು ಮತ್ತು ಮೊಡವೆಗಳನ್ನು ತೆಗೆದುಹಾಕುವಲ್ಲಿ ತುಳಸಿ ನೀರು ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರತಿದಿನ ತುಳಸಿ ನೀರನ್ನು ಕುಡಿಯುತ್ತ ಬಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಉತ್ತಮವಾಗಿರುತ್ತದೆಯಾಗಿದೆ.