ಕಾಸರಗೋಡು ಜಿಲ್ಲೆಯ ಗಡಿಭಾಗವಾದ ಕುಂಬಳೆ ಸಮೀಪ ಬಂಬ್ರಾಣ ಎಂಬಲ್ಲಿ ತಾಯಿಯೊಬ್ಬರು ತನ್ನ ಮಗುವಿಗೆ ಎದೆಹಾಲು ಕುಡಿಸುವ ಸಂದರ್ಭದಲ್ಲಿ ಎದೆ ಹಾಲು ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಅಬ್ದುಲ್ ಅಜೀಜ್-ಖದೀಜಾ ದಂಪತಿ ಪುತ್ರಿ ಎರಡೂವರೆ ತಿಂಗಳ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಲಗಿ ಎದೆಹಾಲ ಕುಡಿಯುತ್ತಿದ್ದ ಮಗು ಎಷ್ಟು ಹೊತ್ತಾದರೂ ಎಚ್ಚರಗೊಳ್ಳದ ಕಾರಣ ಗಾಬರಿಯಾಗಿ ವೈದ್ಯರ ಬಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಗಂಟಲಲ್ಲಿ ಹಾಲು ಸಿಕ್ಕಿ ಮೃತ ಹೊಂದಿರುವುದು ಅರಿವಾಗಿದೆಯಾಗಿದೆ.