ಬಜೆಟ್‌ನಲ್ಲಿ 7 ಲಕ್ಷ ರೂಪಾಯಿ ವೈಯಕ್ತಿಕ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದ ಸರ್ಕಾರ ಈಗ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಿ ಈ ಪ್ರಸ್ತಾಪವನ್ನು ಅಧಿಕೃತವಾಗಿ ಜಾರಿ ಮಾಡಿದೆ. ಈ ಸಂಬಂಧ ಹಣಕಾಸು ಸಚಿವಾಲಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದೆ.
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 87ಕ್ಕೆ ತಿದ್ದುಪಡಿ ಮಾಡಿ ವಾರ್ಷಿಕ ಬಜೆಟ್‌ನಲ್ಲಿ ಪ್ರಕಟಿಸಿದ ಘೋಷಣೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದೆ. ಆದಾಯ 7 ಲಕ್ಷ ರೂಪಾಯಿಯ ತನಕ ಇದ್ದಲ್ಲಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಸುವಾಗ ಕಟ್ಟಿರುವ ತೆರಿಗೆಯನ್ನು ರಿಬೇಟ್ ಅಥವಾ ವಾಪಸ್ ಪಡೆದುಕೊಳ್ಳುವ ಅವಕಾಶ ಲಭ್ಯವಿರುತ್ತದೆ. ಈ ಹಿಂದೆ 5 ಲಕ್ಷ ರೂಪಾಯಿ ತನಕ ಆದಾಯ ಇದ್ದವರಿಗೆ ಈ ವಿನಾಯಿತಿ ನೀಡಲಾಗುತ್ತಿತ್ತು. 2023ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಅವಕಾಶವನ್ನು 7 ಲಕ್ಷ ರೂ. ಆದಾಯ ಇರುವವರಿಗೂ ವಿಸ್ತರಿಸಿದ್ದರಾಗಿದೆ.