ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಪವಿತ್ರ ರಾಮಮಂದಿರಕ್ಕೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ರಾಮಮಂದಿರಕ್ಕೆ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ.
ಅಯೋಧ್ಯೆಯು ರಾಮ ಮಂದಿರದ ಉದ್ಘಾಟನೆಗೆ ತಯಾರಿ ನಡೆಸುತ್ತಿದೆ. ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಈ ಪ್ರದೇಶದಲ್ಲಿರುವ ಸುತ್ತಮುತ್ತಲಿನ ಭೂಮಿ ಬೆಲೆ ಗಗನಕ್ಕೇರಿದೆ. ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮವೂ ಜಿಗಿತ ಕಂಡಿದ್ದು, ಹೋಟೆಲ್ ಉದ್ಯಮಿಗಳೂ ಇತ್ತ ಧಾವಿಸುತ್ತಿದ್ದಾರೆ. ಇದಲ್ಲದೆ ಹಿರಿಯ ನಾಗರಿಕರು ಅಯೋಧ್ಯೆಯಲ್ಲಿ ಜಾಗ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ದೇಶದ ವಿವಿಧೆಡೆಯ ಮತ್ತು ವಿದೇಶಗಳಿಂದ ಹಲವು ಹೂಡಿಕೆದಾರರು ಇಲ್ಲಿನ ಜಾಗ ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದರಿಂದ ಭೂಮಿಯ ಬೆಲೆ ಗಗನಕ್ಕೇರಿದೆ. ಕೆಲವೆಡೆ ಕೇವಲ ನಾಲ್ಕರಿಂದ ಐದು ವರ್ಷಗಳಲ್ಲಿ ಹತ್ತು ಪಟ್ಟು ಬೆಲೆ ಹೆಚ್ಚಾಗಿದೆ. ರಿಯಲ್ ಎಸ್ಟೇಟ್‌ನ ಈ ಚೇತರಿಕೆ ದೇಶಾದ್ಯಂತದ ಹೂಡಿಕೆದಾರರನ್ನು ಆಕರ್ಷಿಸಿದೆ. ಅನಿವಾಸಿ ಭಾರತೀಯರು ಮಾತ್ರವಲ್ಲಿ ದೇಶದ ಹಿರಿಯ ನಾಗರಿಕರು ಇಲ್ಲಿ ಮನೆ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಹೇಳಿದ್ದಾರೆ. ಜನವರಿ 22ರಂದು ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿರುವುದರಿಂದ ಅಯೋಧ್ಯೆಯಲ್ಲಿ 15 ಕಿ.ಮೀ ಸುತ್ತಲಿನ ಚದರ ಅಡಿ ಬೆಲೆ 3 ಸಾವಿರದಿಂದ 15 ಸಾವಿರ ರೂ. ಅಯೋಧ್ಯೆ ನಗರದ ಬಿಲ್ಡರ್ ಒಬ್ಬರು ಭೂಮಿಯ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದಾರೆ. ರಾಮಮಂದಿರ ತೆರೆಯಲು 12 ದಿನಗಳು ಬಾಕಿಯಿದ್ದು, ಅಯೋಧ್ಯೆಯಲ್ಲಿ ಭಕ್ತರ ವಾಸ್ತವ್ಯದ ವೆಚ್ಚ ಹೆಚ್ಚಾಗಿದೆ. 2019 ರಲ್ಲಿ ಮಂದಿರ ನಿರ್ಮಾಣದ ಮೊದಲು ಇದ್ದ ಭೂಮಿಯ ಬೆಲೆಗೆ ಹೋಲಿಸಿದರೆ ಈಗಿನ ಬೆಲೆ 20 ಪ್ರತಿಶತದಷ್ಟು ಹೆಚ್ಚಾಗಿದೆ. ಅಯೋಧ್ಯೆಯಲ್ಲಿ ನೀವು ಆಸ್ತಿ ಖರೀದಿಸಲು ಮುಂದಾಗುತ್ತಿದ್ದರೆ ಕೆಲವೊಂದು ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಸಂಭಾವ್ಯ ಮನೆ ಖರೀದಿದಾರರು ಭೂ ಬಳಕೆಯನ್ನು ನಿಯಂತ್ರಿಸುವ ಸ್ಥಳೀಯ ವಲಯ ಕಾನೂನು ಮತ್ತು ನಿಬಂಧನೆಗಳನ್ನು ಪರಿಶೀಲಿಸಬೇಕು. ಅಲ್ಲದೆ ಅಯೋಧ್ಯೆಯ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ದೃಷ್ಟಿಯಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ನಿರ್ಮಾಣ ಅಥವಾ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಕೆಲವು ನಿರ್ಬಂಧಗಳು ಇರಬಹುದಾಗಿದೆ.