ಚಿಕ್ಕಬಳ್ಳಾಪುರ : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರಿ ಒಂದು ತಿಂಗಳ ನಂತರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷವಾಗಿದ್ದು ವಿದೇಶದಲ್ಲಿ ಇದ್ದುಕೊಂಡೆ ವಿಡಿಯೋ ರಿಲೀಸ್ ಮಾಡಿದ್ದಾರೆ ಮೇ 31ರಂದು ಎಸ್ ಐ ಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.
ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೋ ಕಾದು ನೋಡೋಣ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ದೇವೇಗೌಡರು ಮತ್ತು ನಾನು ಎಲ್ಲೇ ಇದ್ದರೂ ಎಸ್ಐಟಿಗೆ ಹಾಜರಾಗಿ ತನಿಖೆಗೆ ಸಹಕಾರ ಕೊಡಬೇಕೆಂದು ದೇವೇಗೌಡರು ಎಚ್ಚರಿಕೆಯನ್ನು ಕೊಟ್ಟಿದ್ದರೂ.ಹಾಗೂ ನಾನು ಒಂದು ಮನವಿ ಕೂಡ ಮಾಡಿದ್ದೆ ಅಲ್ಲದೆ ಕಾರ್ಯಕರ್ತರು ಮೇಲೆ ಗೌರವಿದ್ದರೆ ತಕ್ಷಣ ಬರಬೇಕೆಂದು ಮನೆ ಮಾಡಿದ್ದೆ.
ಅದಕ್ಕೆ ಓಗೊಟ್ಟು ಬರುವುದಕ್ಕೆ ನಮಗೂ ಕೂಡ ಸ್ವಲ್ಪ ಸಮಾಧಾನವಿದೆ.ಅದರಿಂದ ಮುಂದಿನ ದಿನಗಳಲ್ಲಿ ತನಿಖೆಯಲ್ಲಿ ಯಾರ್ಯಾರ ಪಾತ್ರ ಏನಿದೆ ಎಲ್ಲ ಸತ್ಯಾಂಶ ಹೊರಗಡೆ ಬರಬೇಕು ಎಂದರು.ಸೂಚನೆ ಮೇರೆಗೆ ಪ್ರಜ್ವಲ್ ರೇವಣ್ಣ ಸ್ಪಂದಿಸಿದ್ದಕ್ಕೆ ಸಮಾಧಾನ ತಂದಿದೆ. ರಾಜ್ಯ ಸರ್ಕಾರದಿಂದ ಎಸ್ಐಟಿ ತನಿಖೆ ನಡೆಯುತ್ತಿದೆ.ಪ್ರಕರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೋ ಕಾದು ನೋಡೋಣ ಎಂದು ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.
ಆರ್. ಅಶೋಕ್ ಹೇಳಿದ್ದೇನು?
ಇನ್ನೂ ಈ ಒಂದು ವಿಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ, ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಲೇಟ್ ಆಗಿ ಆದ್ರೂ ಸಂಸದ ಪ್ರಜ್ವಲ್ ರೇವಣ್ಣ ಒಪ್ಪಿಕೊಂಡಿದ್ದಾರೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ತನಿಖೆ ನಡೆಯಲಿ ಕಾನೂನಿನಲ್ಲಿ ಏನು ದಾರಿಗಳಿವೆ.ಅದನ್ನು ಹುಡುಕಲಿ ಪ್ರಜ್ವಲ್ ಪ್ರಕರಣದ ಹಿಂದೆ ಷಡ್ಯಂತ್ರವಿ ಅಂತ ವಿಶ್ವಕ್ಕೆ ಗೊತ್ತು.ಆದರೆ ಕಾನೂನಿನ ಅಡಿ ಕೆಲಸ ಮಾಡಬೇಕು ಆದರೆ ಕಾನೂನಾಡಿ ಕೆಲಸ ಮಾಡಬೇಕು ಕೇಸರಿ ರಚನೆ ಮಾಡಿರುವುದು ಕಾಂಗ್ರೆಸ್ನವರು ಅವರ ಕಡೆಯವರನ್ನು ಬಚ ಮಾಡಲು ಎಸ ಐಡಿ ರಚನೆ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ವಾಗ್ದಾಳಿ ನಡೆಸಿದರು.