ರಾಮನಗರ : ಮರದ ಎಲೆಗಳನ್ನು ಮುಚ್ಚಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಅಪರಿಚಿತ ರ ಜೊತೆ ಪತ್ನಿ ವಿಡಿಯೋ ಕಾಲ್ ಮಾಡಿದ್ದಕ್ಕೆ ಪತ್ನಿಯ ಶೀಲಾ ಸಂಖ್ಯೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಕೊಲೆ ಮಾಡಿ ಮರದ ಎಲೆಗಳನ್ನು ಮುಚ್ಚಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಕೊಲೆಯಾದ ಮಹಿಳೆಯನ್ನ ಮಂಗಳಹಳ್ಳಿ ನಿವಾಸಿ ಅಶ್ವಿನಿ (27) ಎಂದು ಹೇಳಲಾಗುತ್ತಿದೆ. ಪತ್ನಿಯನ್ನು ಪತಿ ರಮೇಶ್ (32) ಕೊಲೆಗೈದು ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಅಶ್ವಿನಿ ಹಾಗೂ ರಮೇಶ್ ಗೆ ಮದುವೆಯಾಗಿತ್ತು.
ಅಪರಿಚಿತರ ಜೊತೆ ವಿಡಿಯೋ ಕಾಲ್ ಮಾಡಿದ್ದಕ್ಕೆ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಅಶ್ವಿನಿ ಹಾಗೂ ರಮೇಶಗೆ ಮದುವೆಯಾಗಿತ್ತು. ಕೆಲದಿನಗಳಿಂದ ಪತ್ನಿ ಮೇಲೆ ರಮೇಶ್ ಅನುಮಾನ ಪಟ್ಟು ಜಗಳವಾಡುತ್ತಿದ್ದ.ವಿಡಿಯೋ ಕಾಲ್ ಮಾಡುತ್ತಾಳೆ ಅಂತ ದಂಪತಿ ಮಧ್ಯೆ ಜಗಳ ಶುರುವಾಗಿತ್ತು. ಪತಿ ರಮೇಶನ್ನ ಬಿಟ್ಟು ಪತ್ನಿ ಅಶ್ವಿನಿ ತವರು ಮನೆಗೆ ಹೋಗಿದ್ದಳು.ಮತ್ತೆ ಜಗಳ ಮಾಡಲ್ಲ ಅಂತ ಪತ್ನಿಯನ್ನು ಪತಿ ರಮೇಶ್ ಮನೆಗೆ ಕರೆದುಕೊಂಡು ಬಂದಿದ್ದ.
ಕಳೆದ ಭಾನುವಾರ ಪತ್ನಿಯ ಅಶ್ವಿನಿಯನ್ನು ತಮ್ಮ ನಿವಾಸಕ್ಕೆ ಕರೆದುಕೊಂಡು ಬಂದಿದ್ದ.ನಿನ್ನೆಯಿಂದ ಅಶ್ವಿನಿ ಮನೆಯಲ್ಲಿರಲಿಲ್ಲ.ಕಾಲ್ ಸಹ ರಿಸೀವ್ ಮಾಡಿರಲಿಲ್ಲ. ಪತಿ ಸಹ ಮನೆಯಲ್ಲಿ ಇಲ್ಲದಿದ್ದಕ್ಕೆ ಪೋಷಕರು ಹುಡುಕಾಟ ನಡೆಸಿದ್ದಾರೆ.ತೋಟದ ದಾರಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅಶ್ವಿನೀ ಶವ ಪತ್ತೆಯಾಗಿದೆ.ಇದೀಗ ಪತಿಗಾಗಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಹುಡುಕಾಟ ನಡೆಸುತ್ತಿದ್ದರೆ.ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.