ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ೨೦೨೪ ರ ಚುನಾವಣೆಗಿಂತ ಮೊದಲಿನ ಬಜೆಟ್, ಇದು ಮಧ್ಯಂತರ ಬಜೆಟ್ ಆಗಿರುತ್ತದೆ. ಬಜೆಟ್ನಲ್ಲಿ ದೊಡ್ಡ ಘೋಷಣೆ, ಸುಧಾರಣಾ ಕ್ರಮಗಳ ಸಾಧ್ಯತೆ ಕಡಿಮೆಯಾದರೂ ಸಂಬಳದಾರರಿಗೆ ಕೆಲವಿಷ್ಟು ನಿರೀಕ್ಷೆಗಳಿವೆಯಾಗಿದೆ.
ಆದಾಯ ತೆರಿಗೆ ಪಾವತಿದಾರರಿಗೆ 50,000 ರೂ ಆದಾಯಕ್ಕೆ ಪ್ರಮಾಣಿತ ಕಡಿತವಿದೆ. ಇದನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬ ಅನಿಸಿಕೆ ಜೋರಾಗಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಹೆಲ್ತ್ ಇನ್ಷೂರೆನ್ಸ್, ಎನ್ಪಿಎಸ್ ಹಣಕ್ಕೆ ತೆರಿಗೆ ಕಡಿತ ಸೌಲಭ್ಯವಿದೆ. ಇದನ್ನು ಹೊಸ ರಿಜೈಮ್ಗೂ ಕೊಡಬೇಕು ಎನ್ನುವ ನಿರೀಕ್ಷೆಯಿದೆ. ಹೆಲ್ತ್ ಇನ್ಷೂರೆನ್ಸ್ನ ಪ್ರೀಮಿಯಮ್ ಮೊತ್ತ ಈಗ ಬಹಳ ಹೆಚ್ಚಾಗಿದೆ. ಹೀಗಾಗಿ, ಸದ್ಯ ವರ್ಷಕ್ಕೆ 25,000 ರೂ ಮೊತ್ತಕ್ಕೆ ನೀಡಲಾಗುವ ವಿನಾಯಿತಿ ಮಿತಿ ಹೆಚ್ಚಿಸಬೇಕು. ಹೌಸ್ ರೆಂಟ್ ಅಲೋಯನ್ಸ್ ನ ಮೊತ್ತಕ್ಕೆ ತೆರಿಗೆ ವಿನಾಯಿತಿ ಸೌಲಭ್ಯ ಇದೆ. ಆದರೆ, ಇದು ಕೇವಲ ನಾಲ್ಕು ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಬೆಂಗಳೂರು, ಹೈದರಾಬಾದ್, ಪುಣೆ, ಅಹ್ಮದಾಬಾದ್ ಮೊದಲಾದ ನಗರಗಳಿಗೂ ಎಚ್ಆರ್ಎ ತೆರಿಗೆ ವಿನಾಯಿತಿ ಪಟ್ಟಿಯಲ್ಲಿ ಸೇರಿಸಬೇಕು ಎನ್ನುವ ನಿರೀಕ್ಷೆಯಿದೆ. ಆದಾಯ ತೆರಿಗೆ ಸ್ಲ್ಯಾಬ್ ದರದ ಪರಿಷ್ಕರಣೆ ಯಾಗಬೇಕು. ಮಧ್ಯಮ ಆದಾಯದ ವರ್ಗದವರ ತೆರಿಗೆ ಹೊರೆ ಕಡಿಮೆ ಆಗಬೇಕು ಎನ್ನುವ ನಿರೀಕ್ಷೆ ಕೂಡಾ ಇದೆಯಾಗಿದೆ.