ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆ ನಡಯಲಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ದಿಂಗಾಲೇಶ್ವರ ಶ್ರೀಗಳು ಪೂರ್ಣ ಪ್ರಮಾಣದ ರಾಜಕೀಯ ಅಖಾಡಕ್ಕಿಳಿದ್ದಾರೆ. ಬಾಗಲಕೋಟೆಯ ಎಸ್.ಆರ್.ಪಾಟೀಲ್ ಪರ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದು, ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋ ಒಂದು ವೈರಲ್ ಆಗಿದೆ.
ಹೌದು ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಒಪ್ಪಿಸುತ್ತೇನೆ ಎಂದು ಸ್ಪೋಟಕ ಆಡಿಯೋ ಒಂದು ಹರಿದಾಡುತ್ತಿದೆ.
ನೀವು ಇದೊಂದು ಕೆಲಸ ಮಾಡಿನೋಡಿ ನೀವು ಮುಂದೆ ಸಿಎಂ ಆಗುವ ತನಕ ಏನೇನು ಕೆಲಸ ಮಾಡ್ತೀವಿ ನೋಡಿ’ ಎಂದಿರುವ ಸ್ವಾಮೀಜಿ. ನೀವು ಮಾಡಿ ತೋರಿಸಿ ಆಗ ನಾವು ಏನು ಇದೀವಿ ಅಂತಾ ತೋರಿಸುತ್ತೇವೆ ಎಂದಿರುವ ಶ್ರೀಗಳು. ಈ ಆಡಿಯೋದಿಂದಾಗಿ ಡಿಕೆ ಶಿವಕುಮಾರ ಒಕ್ಕಲಿಗ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯಕ್ಕೂ ಹತ್ತಿರವಾಗುತ್ತಿದ್ದಾರಾ? ಎಂಬ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ಆಗ್ತಿದೆ.
ಒಕ್ಕಲಿಗ ಜೊತೆ ಲಿಂಗಾಯತ ಸಮುದಾಯಕ್ಕೂ ಹತ್ತಿರವಾಗುತ್ತಿದ್ದಾರಾ ಡಿಕೆ ಶಿವಕುಮಾರ್? ನೀವು ಇದೊಂದು ಮಾಡಿ ತೋರಿಸಿ, ನಾವು ಏನು ಇದ್ದೀವೆಂದು ತೋರಿಸುತ್ತೇವೆ. ಡಿ.ಕೆ.ಶಿವಕುಮಾರ್ರನ್ನು ಒಪ್ಪಿಸಿದ್ದೇನೆ ಎಂದಿದ್ದಾರೆ. ಡಿಕೆ ಶಿವಕುಮಾರ್ ಬೆಂಬಲ ಇದೆ, ಸಿಎಂರದ್ದು ಸ್ವಲ್ಪ ಕಷ್ಟ ಇದೆ ಎಂದು ಎಸ್‌ಆರ್ ಪಾಟೀಲ್ ಹೇಳಿದ್ದಾರೆ.
ಡಿಕೆಶಿ ಈಗ ಫಾರ್ಮ್ ನಲ್ಲಿದ್ದಾರೆ, ಸಿಎಂ ಸಿದ್ದರಾಮಯ್ಯದು ಸ್ವಲ್ಪ ಕಷ್ಟ ಇದೆ’ ಎಂದಿರುವ ಎಸ್‌ಆರ್ ಪಾಟೀಲ್. ಸುರ್ಜೇವಾಲ ಸಹಿತ ಹೈಕಮಾಂಡ್ ನಾಯಕರಿಗೆಲ್ಲರಿಗೂ ನಾನು ಎಲ್ಲರಿಗೂ ಪತ್ರ ಬರೆದಿದ್ದೇನೆ. ಅದಕ್ಕೆ ಮಾಡ್ತೀವಿ ಅಂತ ಉತ್ತರ ಕೊಟ್ಟಿದ್ದಾರೆ ಎಂದು ಎಸ್. ಆರ್ ಪಾಟೀಲ್ ಹೇಳಿದ್ದಾರೆ.
ಎಲ್ಲರಿಗೂ ಪತ್ರ ಬರೆದಿದ್ದೇನೆ, ಹೈಕಮಾಂಡ್ ನಾಯಕರಿಗೂ ಕಳಿಸಿದ್ದೇನೆ. ವಿಧಾನಪರಿಷತ್ ಸದಸ್ಯನಾಗಿ ಮಾಡುತ್ತೇವೆ ಅಂತಾ ಉತ್ತರ ಕೊಟ್ಟಿದ್ದಾರೆ. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳುತ್ತಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಿಕೆ ಶಿವಕುಮಾರ್ ಒಬ್ಬರನ್ನೇ ನಂಬಿ ಕೂತಿದ್ದರು. ಡಿಕೆ ಶಿವಕುಮಾರ್ರನ್ನು ನಂಬಿ ಕೂತಿದ್ದಕ್ಕೆ ಲಕ್ಷ್ಮೀ, ಪುತ್ರ ಮೃಣಾಲ್, ಸೋದರ ಚನ್ನರಾಜ್ ಉದ್ಧಾರ ಆದರು ಎಂದಿದ್ದಾರೆ.