ಒಡಿಶಾ: ಪುರಿಯಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರಮೋದಿ ಜಿ ಅವರ ಜನ್ಮದಿನದಂದು ಹಾರೈಸುತ್ತೇನೆ. ಮಹಾಪ್ರಭು ಜಗನ್ನಾಥ ಅವರಿಗೆ ಭಾರತ ಮಾತೆಯ ಸೇವೆ ಮಾಡಲು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನೀಡಲಿ ಎಂದು ಶುಭ ಕೋರಿದ್ದಾರೆ.
ಇದರ ಜೊತೆಗೆ ಪ್ರಧಾನಿ ಹುಟ್ಟುಹಬ್ಬದ ದಿನದಂದು ಮರಳಿನಲ್ಲಿ ವಿಶೇಷವಾಗಿ ತಯಾರಿಸಿದ ಕಲಾಕೃತಿಯನ್ನು ಹಂಚಿಕೊಂಡಿದ್ದಾರೆ.
Wishing Our Hon’ble Prime Minister @narendramodi ji on his birthday. May Mahaprabhu Jagannath bless him with long and healthy life to serve mother India.
I’ve created a SandArt installation used 1,213 Mud Tea Cups on sand with message #HappyBirthdayModiJi at Puri beach , Odisha pic.twitter.com/CEawxt0AUK— Sudarsan Pattnaik (@sudarsansand) September 17, 2022
ಇಲ್ಲಿನ ಕಡಲತೀರದಲ್ಲಿ 1,213 ಮಣ್ಣಿನ ಟೀ ಕಪ್ಗಳನ್ನು ಅಳವಡಿಸಿ ಪಿಎಂ ಮೋದಿ ಅವರ ಮರಳು ಕಲಾಕೃತಿ ರಚಿಸಿ ಶುಭಕೋರಿದರು. ಪಟ್ನಾಯಕ್ ಅವರು 1,213 ಮಣ್ಣಿನ ಟೀ ಕಪ್ಗಳನ್ನು ಜೋಡಿಸು ಮೂಲಕ ‘ಹ್ಯಾಪಿ ಬರ್ತ್ಡೇ ಮೋದಿ ಜಿ’ ಎಂಬ ಸಂದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ 5 ಅಡಿ ಎತ್ತರದ ಮರಳಿನ ಶಿಲ್ಪವನ್ನು ರಚಿಸಿದ್ದಾರೆ. ಈ ಕಲಾಕೃತಿ ರಚಿಸುವುದಕ್ಕೆ ಅವರು ಸುಮಾರು 5 ಟನ್ ಮರಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಸುದರ್ಶನ್ ಪಟ್ನಾಯಕ್ ಕಲಕೃತಿಯ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಪೋಸ್ಟ್ 11,000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಕ್ಕೂ ಹೆಚ್ಚು ಶೇರ್ಗಳನ್ನು ಸ್ವೀಕರಿಸಿದೆ. ಕೆಲವು ಬಳಕೆದಾರರು ಸುಂದರವಾದ ಟೀಕೆಗಳೊಂದಿಗೆ ಕಲಾಕೃತಿಯನ್ನು ಪ್ರಶಂಸಿಸಿದ್ದಾರೆ.
BREAKING NEWS: ಮುರುಘಾ ಶ್ರೀಗಳಿಗೆ ಇಂದು ಸಿಗದ ಜಾಮೀನು: ಅರ್ಜಿ ವಿಚಾರಣೆ ಸೆ.19ಕ್ಕೆ ಮುಂದೂಡಿಕೆ | Murugha Sri