ಬೆಂಗಳೂರು : ರಾಜ್ಯಾದ್ಯಂತ ಇಂದು ನೈರುತ್ಯ ಮನ್ಸೂನ್ ಪ್ರವೇಶ ಮಾಡಿದ್ದೂ, ಇಂದು ಬೆಂಗಳೂರಿನ ಹಲವಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕೂಡ ಭಾರಿ ಮಳೆಯಾಗಿದೆ.
ಅಲ್ಲದೆ ಇತ್ತ ಮಹಾಲಕ್ಷ್ಮಿ ಲೇಔಟ್ ನ ಮಾರುತಿ ನಗರದ ಮುಖ್ಯ ರಸ್ತೆಯಲ್ಲಿ ಬೃಹತ್ ಮರ ಧರೆಗೊಳದಿದ್ದರಿಂದ ಕಾರಿನ ಮುಂಭಾಗ ಭಾಗಶಹ ಜಿತಮ್ಗೊಂಡಿದೆ ಚಾಲಕ ಕಾರು ನಿಲ್ಲಿಸಿ ತೆರಳಿದ ಬಳಿಕ ಮರ ಬಿದ್ದಿದ್ದರಿಂದ ದುರಂತ ಒಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಬೆಂಗಳೂರಿನ ಹೊಸನಗರ, ಶಾಂತಿನಗರ, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ರಾಜಾಜಿನಗರ ಬನಶಂಕರಿ ಸಿಟಿ ಮಾರ್ಕೆಟ್ ನಗರದ ಬಹುತೇಕ ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ ಮಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದ ಘಟನೆ ನಡೆಯಿತು.
ಮೆಜೆಸ್ಟಿಕ್ ರಾಜಾಜಿನಗರ ಮಲ್ಲೇಶ್ವರಂ, ಶಾಂತಿನಗರ, ವಿಧಾನಸೌಧ ಟೌನ್ ಹಾಲ್ ಕೆಆರ್ ಮಾರ್ಕೆಟ್ ಶಾಂತಿನಗರ, ವಿಧಾನಸೌಧ, ಕಾರ್ಪೊರೇಷನ್ ಶಿವಾಜಿನಗರ, ಜಯನಗರ, ಸದಾಶಿವನಗರ, ಹೆಬ್ಬಾಳ, ಯಲಹಂಕ ವಿಜಯನಗರ, ಮೈಸೂರು ರಸ್ತೆ, ಕೆಂಗೇರಿ, ಮಾಗಡಿ ರಸ್ತೆ, ಮಡಿವಾಳ, ಕೋರಮಂಗಲ, ಹೊಸೂರು ರಸ್ತೆ, ಕೆಆರ್ ಪುರಂ ಸೇರಿದೆ ಸುಸ್ತಮುತ್ತ ಧಾರಾಕಾರ ಮಳೆ ಆಯಿತು.ಮಳೆಯಿಂದ ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.