ಬೆಂಗಳೂರು : ಬೆಂಗಳೂರಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ನಡೆಸಿದ ಪರಿಣಾಮ ಓರ್ವ ವ್ಯಕ್ತಿ ಸಾವನಪ್ಪಿದ್ದು, ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮೈಸೂರು ರಸ್ತೆಯ ಇಂದ್ರಪ್ರಸ್ಥ ಅಪಾರ್ಟ್ಮೆಂಟ್ ಬಳಿ ಈ ಒಂದು ಅಪಘಾತ ಸಂಭವಿಸಿದೆ.
ರಸ್ತೆಯಲ್ಲಿ ಅಡ್ಡಾದಿಡಿಯಾಗಿ ಚಾಲಕ ಇಕೋ ಕಾರನ್ನು ಚಲಾಯಿಸಿದ್ದಾನೆ. ಇಕೋ ಕಾರಿನಲ್ಲಿ ಇದ್ದ ಸುಖದೇವ್ ಸಾವನಪ್ಪಿದು ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ. ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಎರಡು ಬೈಕ್ಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಮುಂದೆ ಹೋಗುತ್ತಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ.
ಈ ವೇಳೆ ಹೊರಗೆ ಬಿದ್ದಿದ್ದ ಸುಖದೇವ್ ಮೇಲೆ ಇಕೋ ಕಾರು ಬಿದ್ದಿದೆ. ಎರಡು ಬೈಕ್ ಗಳಿದ್ದ ಮೂವರು ಸವಾರರಿಗೆ ಗಂಭೀರ ಗಾಯಗಳಾಗಿದ್ದು ಕಾರುಬಿದ್ದ ಪರಿಣಾಮ ಸುಖದೇವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಪಘಾತ ಸಂಭವಿಸಿದೆ.








