ಬಳ್ಳಾರಿ: ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗ ಪೊಲೀಸ್ ಅಧೀಕ್ಷಕ ಸಿದ್ಧರಾಜು.ಸಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಸಂಗಮೇಶ ಮತ್ತು ಮಹಮ್ಮದ್ ರಫಿ ಇವರ ನೇತೃತ್ವದಲ್ಲಿ ಮಾರ್ಚ್ ಮಾಹೆಯಲ್ಲಿ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲುಗಳ ಸ್ವೀಕಾರ/ಜನ ಸಂಪರ್ಕ ಸಭೆ ಏರ್ಪಡಿಸಲಾಗಿದೆ.
*ಅಹವಾಲು ಸ್ವೀಕರಿಸುವ ದಿನ ಮತ್ತು ಸ್ಥಳ:*
ಮಾ.12 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕುರುಗೋಡು ತಾಲ್ಲೂಕಿನ ತಹಸೀಲ್ದಾರರ ಕಚೇರಿ ಸಭಾಂಗಣ.
ಮಾ.13 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2 ರ ವರೆಗೆ ಸಿರುಗುಪ್ಪ ತಾಲ್ಲೂಕಿನ ಸಿ.ಡಿ.ಪಿ.ಓ ಕಚೇರಿ ಸಭಾಂಗಣ.
ಮಾ.15 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2 ರ ಸಂಡೂರು ಪಟ್ಟಣದ ತಹಸೀಲ್ದಾರರ ಕಚೇರಿ ಸಭಾಂಗಣ.
ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ವಿಚಾರಿಸಲಾಗುತ್ತದೆ ಹಾಗೂ ಸಾರ್ವಜನಿಕರು ತಮ್ಮ ಅವಹಾಲುಗಳನ್ನು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯ ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಲು ನಮೂನೆ/ಫಾರಂ ನಂ:1 ಮತ್ತು 2ಗಳನ್ನು ನೀಡಲಾಗುತ್ತದೆ. ಕುಂದುಕೊರತೆಗಳಿರುವ ಸಾರ್ವಜನಿಕರು ನಿಗದಿಪಡಿಸಿದ ದಿನದಂದು ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗ ಪೊಲೀಸ್ ಅಧೀಕ್ಷಕ ಸಿದ್ಧರಾಜು.ಸಿ ಅವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.