ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಸುಪ್ರೀಂ ಕೋರ್ಟ್ ನಟ ದರ್ಶನ್ ಜಾಮೀನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿತ್ತು. ಆದರೆ ಬೆನ್ನಲ್ಲೇ ಹಿಂದೆ ದರ್ಶನ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ದರ್ಶನ್, ಪವಿತ್ರ ಗೌಡ ಸೇರಿದಂತೆ ಪ್ರಕರಣದ ಸಂಬಂಧ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಅರೆಸ್ಟ್ ಆಗೋಕೂ ಮುನ್ನ ಬಹುದೊಡ್ಡ ಡ್ರಾಮಾ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಹೌದು ಕೊಲೆ ಆರೋಪಿ ದರ್ಶನ್ ಮತ್ತೊಂದು ನೌಟಂಕಿ ಬಯಲಾಗಿದ್ದು, ದರ್ಶನ್ ಕಳ್ಳಾಟದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಪೊಲೀಸರ ಕಣ್ತಪ್ಪಿಸಿ ನೈಸ್ ರೋಡ್ ನಲ್ಲಿಯೇ ನಟ ದರ್ಶನ್ ಬಂದಿದ್ದರು. ಕದ್ದು ಮುಚ್ಚಿ ದರ್ಶನ್ ವಿಜಯಲಕ್ಷ್ಮಿ ಫ್ಲಾಟ್ ವರ್ಗು ಬರುತ್ತಾರೆ. ಫ್ಲಾಟ್ ನಲ್ಲೂ ಕೂಡ ಹಿಂಬದಿಯಿಂದ ಬಂದು ಅಲ್ಲಿ ಕೂಡ ಪೊಲೀಸರಿಗೆ ಕಣ್ತಪಿಸಿರುತ್ತಾರೆ. ಕೊಲೆ ಆರೋಪದಲ್ಲಿ ಆದರೂ ಸಿಂಪತಿ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿದ್ದರು.
ಪೊಲೀಸರು ಬಂಧಿಸಿದರೆ ಹಿನ್ನಡೆ ಆಗುತ್ತೆ ಎಂದು ನಾಟಕ ಮಾಡಿದರು. ಕೋರ್ಟಿಗೆ ಖುದ್ದು ಶರಣಾಗಲು ದರ್ಶನ್ ಮುಂದಾಗಿದ್ದರು ಕಾನೂನಿಗೆ ಗೌರವ ಕೊಟ್ಟಿದ್ದೇನೆ ಎಂದು ಸಂದೇಶಕ್ಕೆ ಸ್ಕೆಚ್ ಹಾಕಿದ್ದರು. ಪೊಲೀಸರು ಮನೆಗೆ ತಲುಪುವ ಮೊದಲೇ ಅವರು ಮನೆಗೆ ಎಂಟ್ರಿ ಕೊಡುತ್ತಾರೆ ಕೇವಲ ಏಳು ನಿಮಿಷದಲ್ಲಿ ಕೋರ್ಟಿಗೆ ಹೋಗುವುದಕ್ಕೆ ಪ್ಲಾನ್ ಮಾಡಿದ್ದಾರೆ ಕೊಲೆ ಆರೋಪದಲ್ಲಿದ್ದರು, ಸಿಂಪತಿ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.