5G ಇಂಟರ್ನೆಟ್ ಬಳಕೆ ಮಾಡುವ ಕೋಟ್ಯಂತರ ಭಾರತೀಯ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ದೇಶದ ಎರಡೂ ಪ್ರಮುಖ ಟೆಲಿಕಾಂ ಕಂಪನಿಗಳು ದೇಶಾದ್ಯಂತ 5G ಸೇವೆಯ ವ್ಯಾಪ್ತಿಯನ್ನು ಒದಗಿಸಲು ಯೋಜನೆ ಹಾಕಿಕೊಂಡಿದೆ. ದೇಶಾದ್ಯಂತ ಸುಮಾರು 12.5 ಕೋಟಿ 5ಜಿ ಬಳಕೆದಾರರಿದ್ದಾರೆ. ಈ ನಡುವೆ, ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಅನಿಯಮಿತ 5G ಡೇಟಾ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ನೀವು 5G ಅನ್ನು ಉಚಿತವಾಗಿ ಬಳಸುತ್ತಿದ್ದರೆ ಈ ಆಫರ್ ಸದ್ಯದಲ್ಲೇ ಕೊನೆಗೊಳ್ಳಲಿದೆಯಾಗಿದೆ.
2024 ರ ಅಂತ್ಯದ ವೇಳೆಗೆ ಭಾರತದಲ್ಲಿ 5G ಬಳಕೆದಾರರ ಸಂಖ್ಯೆ 20 ಕೋಟಿ ದಾಟುವ ನಿರೀಕ್ಷೆಯಿದ್ದು,ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನ 5G ಯೋಜನೆಗಳು ಅಸ್ತಿತ್ವದಲ್ಲಿರುವ 4G ಯೋಜನೆಗಳಿಗಿಂತ 5-10 ಪ್ರತಿಶತದಷ್ಟು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದಲ್ಲದೆ, ಎರಡೂ ಕಂಪನಿಗಳು 30-40 ಪ್ರತಿಶತ ಹೆಚ್ಚಿನ ಡೇಟಾವನ್ನು ನೀಡಬಹುದು ಎಂದು ಹೇಳಲಾಗಿದೆ. ಹೊಸ 5ಜಿ ರೀಚಾರ್ಜ್ ಯೋಜನೆಗಳು ಪ್ರಸ್ತುತ 4G ರೀಚಾರ್ಜ್ ದರಗಳಿಗಿಂತ ಕನಿಷ್ಠ 5-10% ದುಬಾರಿಯಾಗಲಿದೆ. ಇದರಿಂದ ಟೆಲಿಕಾಂ ಕಂಪನಿಗಳ ಆದಾಯ ಹೆಚ್ಚಾಗಲಿದೆ ಎಂದು ವಿಶ್ಲೇಷಕರು ಉಲ್ಲೇಖಿಸಿದ್ದಾರೆಯಾಗಿದೆ.