ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಅವರನ್ನು ಚಿತ್ರದುರ್ಗದ ಎರಡನೇ ಸೆಷನ್ಸ್ ಕೋರ್ಟಿಗೆ ಹಾಜರುಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಜಿಲ್ಲಾ ಕಾರ್ಯಗ್ರಹದಿಂದ ಎ 1 ಆರೋಪಿಯಾಗಿರುವ ಮುರುಘಾ ಶ್ರೀಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದೆ ಎಂದು ತಿಳಿದುಬಂದಿದೆ.
2022ರ ಅಕ್ಟೋಬರ್ 13ರಂದು ಮುರುಘಾ ಸ್ವಾಮೀಜಿ ವಿರುದ್ಧ 2ನೇ ಪೋಕ್ಸೋ ಕೇಸ್ ದಾಖಲಾಗಿತ್ತು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆ ಎರಡನೇ ಪೋಕ್ಸೋ ಕೇಸ್ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆಗಿತ್ತು. ಎರಡೂ ಕೇಸ್ನಲ್ಲಿ ಸ್ವಾಮೀಜಿಗೆ ಜಾಮೀನು ಚಿತ್ರದುರ್ಗ ಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಜಾಮೀನಿಗಾಗಿ ಮುರುಘಾ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ನಿಂದ 1ನೇ ಪೋಕ್ಸೋ ಕೇಸ್ನಲ್ಲಿ ಮುರುಘಾಶ್ರೀಗೆ ಬೇಲ್ ಸಿಕ್ಕಿತ್ತು. ನವೆಂಬರ್ 16 ರಂದು ಹೈಕೋರ್ಟ್ ಮುರುಘಾಶ್ರೀಗೆ 7 ಷರತ್ತುಗಳು ಹಾಕಿ ಜಾಮೀನು ನೀಡಿತ್ತು. ಬಂಧನವಾಗಿ ಬರೋಬ್ಬರಿ 441 ದಿನಗಳ ಬಳಿಕ ಮುರುಘಾ ಸ್ವಾಮೀಜಿ ರಿಲೀಸ್ ಆಗಿದ್ದರು. ಬಿಡುಗಡೆ ಬಳಿಕ ದಾವಣಗೆರೆಯ ವಿರಕ್ತ ಮಠದಲ್ಲಿ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು.