ಬೆಂಗಳೂರು : ಚಿಕನ್ ಪ್ರಿಯರಿಗೆ ನೆಮ್ಮದಿಯ ಸುದ್ದಿ, ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಕೋಳಿಮಾಂಸದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಕೆಜಿಗೆ 260-280 ರೂ.ವರೆಗೆ ಇದ್ದ ಚಿಕನ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಇಂದು ಕೋಳಿ ಮಾಂಸದ ಬೆಲೆ 180 ರೂ.ಗೆ ಇಳಿದಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಒಂದು ಕೆಜಿ ಚಿಕನ್ ಬೆಲೆ ರೂ. ಇದನ್ನು 150 ರೂ.ಗೆ ಮಾರಾಟವಾಗುತ್ತಿದೆ.
ಇಂದಿನಿಂದ ಶ್ರಾವಣ ಮಾಸ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚಿಕನ್ ಬೆಲೆಯಲ್ಲಿ ಇಳಿಕೆಗೆ ಕಾರಣ ಎನ್ನಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಕೆಜಿಗೆ 260-280 ರೂ. ಇದ್ದ ಚಿಕನ್ ಬೆಲೆಯಲ್ಲಿ ದಿಢೀರ್ 180-150 ರೂ.ವರೆಗೆ ಇಳಿಕೆಯಾಗಿದೆ.