ರಾಮನಗರ: ಖಾಸಗಿ ವ್ಯಕ್ತಿಗಳು, ಎನ್ಜಿಓ ಮತ್ತು ಖಾಸಗಿ ಕಂಪನಿ, ಟ್ರಸ್ಟ್ಗಳು ಸಾರ್ವಜನಿಕರ ಮನೆಗೆ ಭೇಟಿ ನೀಡಿ ಮತದಾರರ ವಯಕ್ತಿಕ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಿರುವುದು ತಿಳಿದುಬಂದಿರುತ್ತದೆ. ಇನ್ನೂ ಕೆಲವರು ಚುನಾವಣಾ ಅಧಿಕಾರಿಗಳಂತೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ಮತದಾರರ ಮನಸ್ಸಿನಲ್ಲಿ ಆತಂಕವನ್ನು ಉಂಟು ಮಾಡಬಹುದು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಉತ್ಸಾಹವನ್ನು ಕುಂಠಿತಗೊಳಿಸಬಹುದು ಹಾಗೂ ಕೆಲವು ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸುವುದನ್ನು ಮುಂದೂಡಬಹುದು.
ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿ ಮಾಹಿತಿ ಸಂಗ್ರಹಣೆ ಮಾಡಲು ಯಾವುದೇ ಖಾಸಗಿ ಏಜೆನ್ಸಿಯನ್ನು ನೇಮಿಸಿರುವುದಿಲ್ಲ. ಖಾಸಗಿ ವ್ಯಕ್ತಿಗಳು, ಎನ್ಜಿಓ ಮತ್ತು ಖಾಸಗಿ ಕಂಪನಿ, ಟ್ರಸ್ಟ್ಗಳು ಮತದಾರರ ವೈಯಕ್ತಿಕ ಹಾಗೂ ಮತದಾರರ ಮಾಹಿತಿಯನ್ನು ನೇರ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಲ್ಲಿ ಅಂತಹವರ ವಿರುದ್ಧ ಐಪಿಸಿ ಸೆಕ್ಷನ್ 188 ರಡಿ ಕಠಿಣ ಕ್ರಮವನ್ನು ಜರುಗಿಸಲಾಗುವುದು.
ಯಾವುದೇ ವ್ಯಕ್ತಿ/ಎನ್ಜಿಓ/ಖಾಸಗಿ ಸಂಸ್ಥೆ/ಕAಪನಿ/ಟ್ರಸ್ಟ್ಗಳಿಗೆ ವಯಕ್ತಿಕ ಹಾಗೂ ಮತದಾನದ ಮಾಹಿತಿಯನ್ನು ನೀಡುವಂತೆ ತಿಳಿಸಿದ್ದಲ್ಲಿ ಹಾಗೂ ಈ ಕುರಿತು ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 1800 425 6106 ಅಥವಾ 1950 ಗೆ ಕರೆ ಮಾಡಿ ದೂರು ಸಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.