ಬೆಂಗಳೂರು: ಎಸ್‌ಐಟಿ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಹಾಗೂ ಡಿಕೆ ಶಿವಕುಮಾರ್ ಇನ್ವೆಗೇಷನ್ ಟೀಂ ಆಗಿದೆ ಅಂತ ಹೆಚ್ ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಎಸ್ ಐ ಟಿ ಅಧಿಕಾರಿಗಳು ಸಿಎಂ, ಡಿಸಿಎಂ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಇಂತಹ ವಿಚಾರದಲ್ಲಿ ನಿಸ್ಸೀಮರು ಅಂಥ ಆರೋಪಿಸಿದರು.
ಇನ್ನೂ ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ಹಂಚಿಕೆ ಮಾಡಿದ್ದಾರೆ. ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಮಾಡಿದ್ದಾರೆ. ಪೆನ್ ಡ್ರೈವ್ ಹಾಸನ ಜಿಲ್ಲೆಗೆ ಮಾತ್ರ ಸೀಮಿತ ಆಗಿರಲಿಲ್ಲ ಅಂತ ಹೇಳಿದರು.ಇದಲ್ಲದೇ ಎಸ್ ಐ ಟಿ ಕೊಟ್ಟಾಗ ಪಾರದರ್ಶಕವಾಗಿ ತನಿಖೆ ಆಗಬಹುದು ಎಂಬು ಭಾವಿಸಿದ್ದೆ. ಆದರೆ ಇದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಹಾಗೂ ಡಿಕೆ ಶಿವಕುಮಾರ್ ಇನ್ವೆಗೇಷನ್ ಟೀಂ ಆಗಿದೆ. ಯಾರ ಜೊತೆಗೆ ಯಾರು ಮಾತನಾಡಿದ್ದಾರೆ ಎಂಬ ಕಾಲ್ ರೆಕಾರ್ಡಿಂಗ್ ಹೊರಬರಬೇಕು. ತನಿಖೆ ಯಾವ ರೀತಿಯಲ್ಲಿ ಹೋಗುತ್ತಿದೆ ಎಂಬುದು ಮುಖ್ಯವಾಗಿದೆ ಅಂಥ ಹೇಳಿದರು.