ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರ ಪರವಾಗಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದು ಈ ವೇಳೆ ಗ್ಯಾರಂಟಿ ಯೋಜನೆಗಳ ಕುರಿತು ಅವರು ಲೇವಡಿ ಮಾಡಿದರು.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರೆಂಟಿಗಳ ಕುರಿತು ಸಂಸದ ಜಗ್ಗೇಶ್ ಲೇವಡಿ ಮಾಡಿದ್ದು ಕುರಿ ಬಲಿ ಕೊಡುವ ಮೊದಲು ಮೆರವಣಿಗೆ ಮಾಡುತ್ತಾರಲ್ಲಾ ಹಾಗೆ ಹರಕೆ ಕುರಿಗೆ ಹಾರ ಹಾಕಿ ಮೆರವಣಿಗೆ ಮಾಡುತ್ತಾರೆ. ಮತದಾರರಿಗೆ ಹೀಗೆ ಹಾಕುತ್ತಿರುವುದೇ ಫ್ರೀ ಬಸ್ ಎಂದರು.
ಹ್ಯಾಂಡ್ ಸ್ಯಾನಿಟೈಜರ್‌ಗಳು ಮೆದುಳಿನ ಕೋಶಗಳನ್ನು ಹಾನಿಗೊಳಿಸಬಹುದು: ಅಧ್ಯಯನ
ಮತದಾರರನ್ನು ಬಲಿಹಾಕಲು ಗ್ಯಾರಂಟಿ ನೀಡಲಾಗಿದೆ.ಎಷ್ಟೇ ಫ್ರೀ ಸ್ಕೀಮ್ ಕೊಟ್ಟರು ಮೋದಿ ಗ್ಯಾರಂಟಿ ಶಾಶ್ವತವಾಗಿರುತ್ತದೆ. ಫ್ರೀ ಬೀಸ್ ಇಟ್ಕೊಂಡ್ರೆ ಸ್ವಾಭಿಮಾನ ಮಾರಿಕೊಂಡಂತೆ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯಸಭಾ ಸದಸ್ಯ ಜಗ್ಗೇಶ್ ಲೆವಡಿ ಮಾಡಿದರು.