ನವದೆಹಲಿ: ಝೆಲೆನ್ಸ್ಕಿ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ, ಪ್ರಧಾನಿ ಮೋದಿ ಅವರು ಹಗೆತನವನ್ನು ಬೇಗನೆ ನಿಲ್ಲಿಸಲು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಅನುಸರಿಸುವ ಅಗತ್ಯವನ್ನು ಪುನರುಚ್ಚರಿಸಿದರು ಎನ್ನಲಾಗಿದೆ. ಉಕ್ರೇನ್ ನ ‘ಸಮಗ್ರತೆ’ಯನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನ ಮಂತ್ರಿಗೆ ಧನ್ಯವಾದ ಅರ್ಪಿಸಿದ ಝೆಲೆನ್ಸ್ಕಿ, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದ ಯುದ್ದದ ಬಗೆಗಿನ ಇತ್ತೀಚಿನ ಹೇಳಿಕೆಯ ಮಹತ್ವವನ್ನು ಒತ್ತಿಹೇಳಿದರು ಎನ್ನಲಾಗಿದೆ.
“ಇಂದಿನ ಯುಗ ಯುದ್ಧದ ಯುಗವಲ್ಲ, ಮತ್ತು ನಾನು ಈ ಬಗ್ಗೆ ನಿಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ” ಎಂದು ಭಾರತದ ಪ್ರಧಾನಿ ಪುಟಿನ್ ಅವರಿಗೆ ತಿಳಿಸಿದರು ಎನ್ನಲಾಗಿದೆ. ಝೆಲೆನ್ಸ್ಕಿ ಮತ್ತು ಪ್ರಧಾನಿ ಮೋದಿ ಅವರು ಜಾಗತಿಕ ಆಹಾರ ಭದ್ರತೆಯ ಬಗ್ಗೆ ಚರ್ಚೆ ನಡೆಸಿದರು ಮತ್ತು ಭಾರತ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ಉಕ್ರೇನ್ ವಿಶ್ವದ ಆಹಾರ ಭದ್ರತೆಯ ಖಾತರಿದಾರನಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ಹೇಳಿದೆ. ಇಬ್ಬರೂ ಪರಮಾಣು ಸುರಕ್ಷತೆ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ, ಮುಖ್ಯವಾಗಿ ವಿಶ್ವಸಂಸ್ಥೆಯಲ್ಲಿನ ಸಹಕಾರದ ಬಗ್ಗೆಯೂ ಮಾತನಾಡಿದರು ಎನ್ನಲಾಗಿದೆ.