ನವದೆಹಲಿ : ನಿನ್ನೆ ಬೀದರ್ನಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಕಾರ್ಯಕ್ರಮ ಒಂದರಲ್ಲಿ ಮುಸ್ಲಿಮತಗಳಿಂದ ಮಾತ್ರ ಸಾಗರ ಖಂಡ್ರೆ ಗೆದ್ದಿದ್ದು, ಮುಸ್ಲಿಂ ಅವರ ಕೆಲಸಗಳನ್ನು ಯಾವುದೇ ಮುಲಾಜಿಲ್ಲದೆ ಮಾಡಬೇಕಾಗುತ್ತದೆ ಎಂಬ ಹೇಳಿಕೆ ಭಾರಿ ಸದ್ದು ಮಾಡಿತ್ತು. ಈ ಒಂದು ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಲು ಇವರು ನಾಲಾಯಕರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇವರ ನಡವಳಿಕೆಯನ್ನು ನೋಡಿದರೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಿದೆ ಅನ್ನುವ ಭ್ರಮೆಯಲ್ಲಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಪಶು ಆಸ್ಪತ್ರೆಗೆ ನೀಡಿದ ಜಾಗವನ್ನು ಏಕಾಏಕಿ ವಕ್ಫ ಮಂಡಳಿಗೆ ನೀಡಿದೆ. ಒಂದು ಕಡೆಯಿಂದ ಮಾತನಾಡಿದ್ದಾರೆ ಜವಾಬ್ದಾರಿ ಸ್ಥಾನದಲ್ಲಿದ್ದು ಈ ರೀತಿ ಹೇಳಿಕೆ ನೀಡಿದ್ದಾರೆ.
ಯಾವ ಅರ್ಥದಲ್ಲಿ ಜಮೀರ್ ಅವರು ಮಾತನಾಡಿದ್ದಾರೆ ಎಂದರೆ ಮುಸಲ್ಮಾನ ಓಟಿನಿಂದ ಮಾತ್ರ ಸಾಗರ್ ಖಂಡ್ರೆ ಗೆದ್ದಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರದಲ್ಲಿ ಸಚಿವ ರಾಗಿ ಕೆಲಸ ಮಾಡಲು ಕೂಡ ನಾಲಾಯಕ ಸಚಿವರಾಗಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರು ಆಗ ಮುಖ್ಯಮಂತ್ರಿಗಳಿಗೆ ನಾನು ಏನು ಕೇಳುತ್ತೇನೆ ಎಂದರೆ ಜಮೀರ್ ಅಹ್ಮದ್ ಅವರ ಹೇಳಿಕೆಯನ್ನು ಒಪ್ಪಿಕೊಳ್ಳುತ್ತಾರಾ?
ಈ ರೀತಿ ಸಂವಿಧಾನ ವಿರುದ್ಧವಾದ ಹೇಳಿಕೆಗಳನ್ನು ಹೇಳಿಕೊಂಡು ಅಲ್ಪಸಂಖ್ಯಾತರ ತುಷ್ಟಿಕರಣ ರಾಜಕಾರಣ ಎಲ್ಲೋ ಒಂದು ಕಡೆ ಅಧಿಕಾರದ ಅಮಲಿನಲ್ಲಿ ತೆಲುತ್ತಿದ್ದಂತೆ ಇರುವಂತಹ ರಾಜ್ಯ ಕಾಂಗ್ರೆಸ್ ಸರ್ಕಾರ ಈ ರೀತಿ ಹೇಳಿಕೆಗಳು ಪದೇ ಪದೇ ಪುನರಾವರ್ತನೆ ಆಗುತ್ತಿವೆ.ಕೇವಲ ಜಮೀರ್ ಅಹ್ಮದ್ ಬಾಯಿಂದ ಬಂದಿರುವಂತಹ ಅಂಶಗಳಷ್ಟೇ ಅಲ್ಲದೆ ಈ ಹಿಂದೆ ಹಲವು ನಾಯಕರು ಮಾತನಾಡಿದ್ದಾರೆ.
ಈ ರೀತಿ ಅವಿವೇಕದ ರೀತಿಯಲ್ಲಿ ಮಾತನಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದಿರಬಹುದು,ಆದರೆ ಎಲ್ಲೋ ಒಂದು ಕಡೆ ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರೆ.ರಾಜ್ಯವನ್ನು ಇಂದು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ. ತಾವು ಕೊಟ್ಟಂತಹ ಭರವಸೆಗಳನ್ನು ನೀಡಿಸಲು ಸಾಧ್ಯವಿಲ್ಲ. ಗ್ಯಾರಂಟಿಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಗ್ಯಾರಂಟಿಗಳನ್ನು ಮುಂದುವರೆಸಲು ಬೆಲೆಗಳನ್ನು ಮನಸೋ ಇಚ್ಛೆ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ವಿರುದ್ಧ ಬಿಜೆಪಿ ಹೈಕಮಾಂಡಿಗೆ ಹೋರಾಟದ ವಿವರ ಸಲ್ಲಿಕೆ
ಇನ್ನೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಹೋರಾಟದ ವಿವರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೋರಾಟದ ಸಂಪೂರ್ಣ ವಿವರವನ್ನು ಹೈಕಮಾಂಡ್ ಗೆ ಸಲ್ಲಿಸಿದ್ದಾರೆ. ವಾಲ್ಮೀಕಿ ನಿಗಮದಲಿನ ಹಣಕಾಸು ಅವ್ಯವಹಾರ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗೆಗಿನ ಹೋರಾಟ, ತುರ್ತು ಪರಿಸ್ಥಿತಿ ಕರಾಳ ದಿನದ ಕುರಿತಾದ ಹೋರಾಟ, ರಾಜ್ಯದ ಬೆಳವಣಿಗೆಗಳು ಬಿಜೆಪಿ ಹೋರಾಟಗಳ ವಿವರವನ್ನು ಕೇಂದ್ರ ಸಚಿವ ಅಮಿತ್ ಶಾ ಸೇರಿ ವರಿಷ್ಠರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಲುಪಿಸಿದ್ದಾರೆ.