ಕೆಎನ್ಎನ್ಡಿಜಿಟಲ್ಡೆಸ್ಕ್: ಈ ಬಾಯ್ಕಾಟ್ ಎಂಬ ಹಾಳು ಸಂಸ್ಕೃತಿ ಬಾಲಿವುಡ್ ನಲ್ಲಿ ಇತ್ತು. ಅದಕ್ಕೆ ಅದೆಷ್ಟೋ ಸಿನಿಮಾಗಳು ಬಲಿಯಾಗಿದ್ದೂ ಉಂಟು. ಸಾಲು ಸಾಲು ಬಾಲಿವುಡ್ ಸಿನಿಮಾಗಳ ಸೋಲಿಗೆ ಬಾಯ್ಕಾಟ್ ಕೂಡ ಕಾರಣ. ಆದ್ರೆ ಆ ಸಂಸ್ಕೃತಿಯ ಗಾಳಿ ಇತ್ತಿಚೆಗೆ ಸ್ಯಾಂಡಲ್ ವುಡ್ ಕಡೆಗೂ ಹರಿಯುತ್ತಿದೆ. ಬನಾರಸ್ ಸಿನಿಮಾಗೂ ಆ ಗಾಳಿ ಸೋಕಿತ್ತು. ಇದೀಗ ಅದೆಲ್ಲವನ್ನು ಮೀರಿ ಬನಾರಸ್ ತಂಗಾಳಿಯಂತೆ ಎಲ್ಲರ ಮೈಮನ ಮುಟ್ಟುತ್ತಿದೆ.
ಝೈದ್ ಖಾನ್ ಸಾವಿರಾರು ಕನಸುಗಳನ್ನು ಹೊತ್ತು ಕನ್ನಡದಲ್ಲಿಯೇ ಲಾಂಚ್ ಆಗಿರುವ ನಟ. ಶ್ರೀಮಂತ ಕುಟುಂಬದಿಂದ ಬಂದವರಿಗೆ ಹಣ ಒಂದಿದ್ರೆ ಎಲ್ಲವನ್ನು ಪಡೆದುಬಿಡಬಹುದು ಎಂಬ ಮಾತುಗಳು ಇದೆ. ಝೈದ್ ಖಾನ್ ಗೆ ಕೂಡ ಆ ಆರೋಪದ ನಂಟೇನು ದೂರ ಇರಲಿಲ್ಲ. ಹಣ ಕೊಳೆಯುತ್ತಿದೆ. ಆ ಮೂಲಕ ಅವರೇ ಸಿನಿಮಾ ಮಾಡಿಕೊಳ್ಳಬಹುದು ಎಂಬ ಮಾತುಗಳೆಲ್ಲಾ ಕೇಳಿ ಬಂದಿತ್ತು. ಆದ್ರೆ ಬನಾರಸ್ ಸಿನಿಮಾವನ್ನು ನೋಡಿದ ಮೇಲೆ ಅದೆಲ್ಲವೂ ಮೂಲೆ ಗುಂಪಾಗುವಂತೆ ಮಾಡಿದೆ. ಝೈದ್ ಖಾನ್ ನನ್ನು ನಂಬಿ ಹಣವನ್ನು ಹಾಕಬಹುದು ಎಂಬುದನ್ನು ಪ್ರೂವ್ ಮಾಡಿದ್ದಾರೆ.
ಥಿಯೇಟರ್ ಗೆ ಬರುವ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದಾಗಲೇ ಬನಾರಸ್ ಸಿನಿಮಾವನ್ನು ಕಣ್ತುಂಬಿಕೊಂಡಿದ್ದರು. ಪ್ರಿರಿಲೀಸ್ ಇವೆಂಟ್ ದಿನ ಝೈದ್ ಖಾನ್ ನನ್ನು ಒಬ್ಬ ಸ್ನೇಹಿತ ಎಂಬುದಕ್ಕಿಂತ ಕಲಾವಿದನಂತೆ ನೋಡಿ ಹೊಗಳಿದ್ದರು. ಆ ಹೊಗಳಿಕೆ ಎಷ್ಟು ಸತ್ಯ ಎಂಬುದು ಬನಾರಸ್ ನೋಡಿದ ಮೇಲೆ ಎಲ್ಲರಿಗೂ ಅರ್ಥವಾಗಿದೆ. ಸಿನಿಮಾ ನೋಡುದ ಪ್ರತಿಯೊಬ್ಬರು ನಟನ ಬಗ್ಗೆ ಪಾಸಿಟವ್ ಮಾತುಗಳನ್ನು ಆಡುತ್ತಿದ್ದಾರೆ. ಹೀಗಾಗಿಯೇ ಬನಾರಸ್ ನೋಡದವರಿಗೂ ಕುತೂಹಲ ಮನೆ ಮಾಡಿದೆ. ಥಿಯೇಟರ್ ಗಳತ್ತ ಮುಖ ಮಾಡುತ್ತಿದ್ದಾರೆ. ಝೈದ್ ಖಾನ್ ಸಿನಿಮಾ ನಟನೇ ಆಗಬೇಕೆಂದು ಸಾಕಷ್ಟು ತಯಾರಿ ನಡೆಸಿದ್ದಾರೆ, ಸಾಕಷ್ಟು ತರಬೇತಿ ಪಡೆದಿದ್ದಾರೆ. ಅದು ತೆರೆಯ ಮೇಲೆ ಅದ್ಭುತವಾಗಿ ವ್ಯಕ್ತವಾಗುತ್ತಿದೆ. ಜಯತೀರ್ಥ ಟೈಮ್ ಟ್ರಾವೆಲಿಂಗ್ ನಲ್ಲಿ ಝೈದ್ ಖಾನ್ ಪರ್ಸನಾಲಿಟಿಯನ್ನು ಬನಾರಸ್ ನ್ನಷ್ಟೇ ಸುಂದರವಾಗಿ ತೋರಿಸಿದ್ದಾರೆ. ನವೆಂಬರ್ 4ರಂದು ತೆರೆಕಂಡ ಸಿನಿಮಾ ಕರ್ನಾಟಕ ಸೇರಿದಂತೆ ದೇಶಾದ್ಯಂತ ಒಳ್ಳೆ ಪ್ರದರ್ಶನವನ್ನೇ ಕಾಣುತ್ತಿದೆ.