ಬೆಂಗಳೂರು: ನಗರದಲ್ಲಿ ಡ್ಯಾನ್ ಮಾಡುವಾಗ ಮೈ ಟಚ್ ಮಾಡಿದ ಅಂತ ಒಂದೇ ಒಂದು ಕಾರಣಕ್ಕೆ ಯುವಕನೋರ್ವನನ್ನು ನಾಲ್ವರು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರೋ ಘಟನೆ ನಡೆದಿದೆ.
ಬೆಂಗಳೂರಿನ ಗಿರಿನಗರದಲ್ಲಿ ಶಿವರಾತ್ರಿ ಪ್ರಯುಕ್ತ ಡ್ಯಾನ್ಸ್ ಆಯೋಜಿಸಲಾಗಿತ್ತು. ಈ ಡ್ಯಾನ್ಸ್ ಮಾಡುವ ವೇಳೆಯಲ್ಲಿ ಯೋಗೇಶ್(23) ಮೈ ಟಚ್ ಮಾಡಿದ್ದನಂತೆ. ಈ ಕಾರಣಕ್ಕೆ ಡ್ಯಾನ್ಸ್ ಮುಗಿಸಿ ಮನೆಗೆ ಹೊರಟಂತ ಯೋಗೇಶ್ ನನ್ನು ನಾಲ್ವರು ಹಿಂಭಾಲಿಸಿ ತೆರಳಿದ್ದಾರೆ.
ರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದಂತ ಯೋಗೇಶ್ ನನ್ನು ಫಾಲೋ ಮಾಡಿದಂತ ನಾಲ್ವರು ಗಲಾಟೆ ತೆಗೆದು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದಿದ್ದಾರೆ. ಚಾಕು ಇರಿತಕ್ಕೆ ಒಳಗಾದಂತ ಯೋಗೇಶ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಂತ ಬ್ಯಾಟರಾಯನಪುರ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
BREAKING: ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ‘ಬಾಂಬರ್ ಹೊಸ ಪೋಟೋ’ ಬಿಡುಗಡೆ ಮಾಡಿದ ‘NIA’
BREAKING: ರಾಜ್ಯದ ಈ ಪ್ರಸಿದ್ಧ ‘ಶ್ರೀರಾಮಮಂದಿರ’ ಸ್ಪೋಟಿಸೋದಾಗಿ ‘ಅಲ್ಲಾ ಹು ಹೆಸರಿ’ನಲ್ಲಿ ‘ಬಾಂಬ್ ಬೆದರಿಕೆ’ ಪತ್ರ