ಹಾವೇರಿ : ಪ್ರಸ್ತುತ ಭಾರತಕ್ಕೆ ಸದೃಢ ಯುವಕರ ಅವಶ್ಯಕತೆ ಇದೆ ಇಂಥಹ ಯುವಕರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಪ್ರೊ.ಮೋಹನ ಬೆಣಗೇರಿ ಹೇಳಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪ ನ ದಿನಾಚರಣೆಯ ಪ್ರಯುಕ್ತ ಕಳ್ಳಿಹಾಳದ SC/ST ವಸತಿಯುತ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಮೋಹನ ಬೆಣಗೇರಿ ಅವರು” ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಯುವಕರ ಪಾತ್ರ ” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಪ್ರಸ್ತುತ ಭಾರತಕ್ಕೆ ಸದೃಢ ಯುವಕರ ಅವಶ್ಯಕತೆ ಇದೆ ಇಂಥಹ ಯುವಕರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ದೇಶದ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಯುವಕರು ಆಧಾರ ಸ್ಥಂಭಗಳಾಗಿದ್ದಾರೆ ಇಂಥಹ ಯುವಕರಿಂದ ನವ ಭಾರತ ನಿರ್ಮಾಣವಾಗ ಬೇಕಾದರೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಂಡು ಭಾರತ ಮಾತೆಯ ಸೇವೆಯನ್ನು ಸ್ವಮನಸ್ಸಿನಿಂದ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ.ಆನಂದ ಬೈರಾಪುರ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಹುಟ್ಟು, ಬೆಳವಣಿಗೆ ಹಾಗೂ ಪ್ರಸ್ತುತ ದಿನಮಾನದಲ್ಲಿ ಪದವಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ವ್ಯಕ್ತಿತ್ವ ವಿಕಸನ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಪ್ರಗತಿಪರ ಚಿಂತನೆ, ರಾಷ್ಟ್ರೀಯ ಜಾಗೃತಿ, ಶ್ರಮದಾನದ ಮಹತ್ವ ಇನ್ನು ಮುಂತಾದ ಉದಾತ್ತ ಗುಣಗಳನ್ನು ವಿದ್ಯಾರ್ಥಿಗಳು ಕಲಿಯಲು ರಾಷ್ಟ್ರೀಯ ಸೇವಾ ಯೋಜನೆಯು ಒಂದು ವೇದಿಕೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ, D.T ಪಾಟೀಲ್ ವಹಿಸಿದ್ದರು. ಕುಮಾರಿ. ತೇಜಸ್ವಿನಿ ವಡ್ಡರ್ ಪ್ರಾರ್ಥಿಸಿದರು. ಪ್ರೊ. ರಾಜಶೇಖರ ಮಾತನವರ ಸ್ವಾಗತಿಸಿದರು. ಪ್ರೋ. ರಾಜಕುಮಾರ ಉಕುಂದ ವಂದಿಸಿದರು. ಪ್ರೊ. ಹನುಮಂತಪ್ಪ.B. ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದಲ್ಲಿ ಪ್ರೊ. ಶಿವಾನಂದ ತೆಪ್ಪದ. ಪ್ರೊ. ಮಹಮ್ಮದ್ ಶರೀಫ್ ಹಾನಗಲ್. ಪ್ರೊ.ಕಿರಣ್ ಬಡಿಗೇರ್ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.