ಮಲಪ್ಪುರಂ(ಕೇರಳ): ಕಡಿಮೆ ಸಕ್ಕರೆ ಹಾಕಿದ ಟೀ ಕೊಟ್ಟ ಹೋಟೆಲ್ ಮಾಲೀಕನಿಗೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಆಘಾತಕಾರಿ ಕೇರಳದ ಮಲಪ್ಪುರಂನಲ್ಲಿ ಘಟನೆ ನಡೆದಿದೆ.
ಮಲಪ್ಪುರಂ ತಾನೂರ್ ಟೌನ್ನಲ್ಲಿರುವ ಟಿಎ ರೆಸ್ಟೋರೆಂಟ್ನಲ್ಲಿ ಮಂಗಳವಾರ ಬೆಳಗ್ಗೆ 5.30ಕ್ಕೆ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಹೋಟೆಲ್ ಮಾಲೀಕ ಮನಾಫ್ನನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ, ಆರೋಪಿ ಸುಬೈರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಲೀಕ ಕೊಟ್ಟ ಟೀಯಲ್ಲಿ ಸಕ್ಕರೆ ಕಡಿಮೆಯಾಗಿದೆ ಎಂಬ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಸುಬೈರ್ ಹೋಟೆಲ್ನಿಂದ ಹೊರ ನಡೆದಿದ್ದ. ಇದಾದ ಸ್ವಲ್ಪ ಅಮಯದ ನಂತ್ರ, ಅದೇ ಹೋಟೆಲ್ಗೆ ಬಂದ ಸುಬೈರ್ ಹೋಟೆಲ್ ಮಾಲೀಕನಿಗೆ ಹಲವು ಬಾರಿ ಇರಿದಿದ್ದಾನೆ.
BIG NEWS : ಮುಂದಿನ ತಿಂಗಳಿನಿಂದ ಈ ಕಂಪ್ಯೂಟರ್ಗಳಲ್ಲಿ ʻGoogle Chromeʼ ಕೆಲಸ ನಿರ್ವಹಿಸೋದಿಲ್ಲ… ಕಾರಣ?
BIG NEWS : ಮುಂದಿನ ತಿಂಗಳಿನಿಂದ ಈ ಕಂಪ್ಯೂಟರ್ಗಳಲ್ಲಿ ʻGoogle Chromeʼ ಕೆಲಸ ನಿರ್ವಹಿಸೋದಿಲ್ಲ… ಕಾರಣ?