ಬೆಂಗಳೂರು: ನಗರದ ಶಕ್ತಿ ಸೌಧ ವಿಧಾನಸೌಧದ ಮುಂದೆಯೇ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಯುವಕನನ್ನು ವಶಕ್ಕೆ ಪಡೆದಿರುವಂತ ಪೊಲೀಸರು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಮುಂದೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಂಜಯ್ ಎಂಬಾತ ವಿಷ ಸೇವಿಸಲು ಯತ್ನಿಸಿದ್ದಾನೆ. ಕೂಡಲೇ ಮಫ್ತಿಯಲ್ಲಿದ್ದಂತ ವಿಧಾನಸೌಧ ಠಾಣೆಯ ಪೊಲೀಸರು ಸಂಜಯ್ ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ಲಾಸ್ಟಿಕ್ ಕವರ್ ನಲ್ಲಿ ವಿಷ ಹಾಗೂ ಕೆಲವು ದಾಖಲೆಗಳನ್ನು ಸಂಜಯ್ ತಂದಿದ್ದನು. ಚನ್ನರಾಯಪಟ್ಟಣ ಠಾಣೆಯ ಪೊಲೀಸರು ನನಗೆ ಹೊಡೆದಿದ್ದಾರೆ. ನನಗೆ ನ್ಯಾಯಕೊಡಿಸಬೇಕು ಎಂಬುದಾಗಿ ವಿಷ ಸೇವಿಸಲು ಮುಂದಾಗಿದ್ದ ಸಂಜಯ್ ವಶಕ್ಕೆ ಪಡೆದಿದ್ದಾರೆ.
ವಿಷ ಸೇವಿಸಿದ್ದೇನೆ ಎಂಬುದಾಗಿ ಸಂಜಯ್ ಹೇಳಿದ ಕಾರಣ, ಆತನನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಹುಚ್ಚಾಟವಾಡುತ್ತಿದ್ದಂತ ಸಂಜಯ್ ನನ್ನು ಪೊಲೀಸರು ಆಸ್ಪತ್ರಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BREAKING: 6 ವಾರಗಳಲ್ಲಿ ಉಬರ್, Rapido ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ | Bike Taxi
BREAKING: ಬಿಸಿಲಿನ ತಾಪಮಾನ ಹಿನ್ನಲೆ: ರಾಜ್ಯ ಸರ್ಕಾರದಿಂದ ‘ಸರ್ಕಾರಿ ಕಚೇರಿ’ ಕೆಲಸದ ಸಮಯ ಬದಲಿಸಿ ಆದೇಶ