ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಕೇವಲ ಸಮುದ್ರಕ್ಕೆ ಸೀಮಿತವಾಗದೆ ಈಗ ರಾಜತಾಂತ್ರಿಕ ಮಟ್ಟದಲ್ಲಿ ಅತ್ಯಂತ ಕೆಳಮಟ್ಟದ ವಾಕ್ಸಮರಕ್ಕೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇರಾನ್ ರಾಯಭಾರ ಕಚೇರಿಯು “ಮೌಢ್ಯ” (Idiot) ಎಂದು ಕರೆಯುವ ಮೂಲಕ ಜಾಗತಿಕ ವೇದಿಕೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಒಬ್ಬರದ್ದೆನ್ನಲಾದ ಆಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅದರಲ್ಲಿ ಅಮೆರಿಕದ ನೌಕಾಪಡೆಯನ್ನು ಗುರಿಯಾಗಿಸುವ ಕುರಿತು ಮಾತನಾಡಲಾಗಿತ್ತು. ಈ ಆಡಿಯೋವನ್ನು ಉಲ್ಲೇಖಿಸಿ ಟ್ರಂಪ್ ಎಚ್ಚರಿಕೆ ನೀಡಿದ್ದರು.
ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ರಾಯಭಾರ ಕಚೇರಿ, “ನಿಮ್ಮ ಇಡಿಯಟ್ (Idiot) ಅಧ್ಯಕ್ಷರಿಗೆ ವಿಷಯದ ಸರಿಯಾದ ಅರಿವಿಲ್ಲ” ಎಂದು ಕಿಡಿಕಾರಿದೆ.
”ಯಾರು ನಿಜವಾದ ಇಡಿಯಟ್ ಎಂದು ತಿಳಿಯಲು ಒಮ್ಮೆ ಗೂಗಲ್‌ನಲ್ಲಿ ‘Idiot’ ಎಂದು ಸರ್ಚ್ ಮಾಡಿ ನೋಡಿ” ಎಂದು ಇರಾನ್ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.








