ಮಹಾರಾಷ್ಟ್ರ : ರೈಲು ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಗರದಲ್ಲಿ ನಡೆದಿದೆ. ಪೊಲೀಸರ ಲಾಠಿ ಚಾರ್ಜ್ ಗೆ ಹೆದರಿ ಮೂವರು ಯುವಕರು ಹೆದರಿ ಓಡಿ ಹೋಗುತ್ತಿದ್ದರು. ಈ ವೇಳೆ ಗೂಡ್ಸ್ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದ್ದಾರೆ.
ಸ್ವಪ್ನಿಲ್ ಶೈಲೇಶ ಪಲಾಂಡೆ (23) ಕುನಾಲ್ ಕುಮಾರ್ (23) ಹಾಗೂ ಅಪ್ರೋಜ್ ಖಲೀಲ್ ಶೇಕ್ (28) ಮೃತ ದುರ್ದೈವಿಗಳು. ಓಲ್ಡ್ ಪಾಲ್ಗರ್ ನಲ್ಲಿರುವ ಜೈನ ದೇವಸ್ಥಾನದ ಬಳಿ ಗುಂಪು ಸೇರಿತ್ತು. ಗುಂಪು ಚತುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಈ ವೇಳೆ ರೈಲ್ವೆ ಹಳಿಯ ಕಡೆಗೆ ಮೂವರು ಯುವಕರು ಓಡಿ ಹೋಗುತ್ತಿದ್ದರು. ಇದೇ ವೇಳೆ ಬರುತ್ತಿದ ರೈಲು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದರೆ. ಪೊಲೀಸರ ವಿರುದ್ಧ ಮೃತರ ಕುಟುಂಬದವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.








