ನವದೆಹಲಿ: ಮಂಗಳವಾರ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆ ಅಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದಿಲ್ಲಿ ವಿಮಾನ ನಿಲ್ದಾಣವು ತನ್ನ “ಕಿರಿಯ ಪ್ರಯಾಣಿಕ” ಆಗಮನವನ್ನು ಸ್ವಾಗತಿಸಿದೆ.
ದಂಪತಿಗಳು ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಗೆ ವಿಮಾನವನ್ನು ಹತ್ತಲು ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ಸೌಲಭ್ಯದಲ್ಲಿ ಆಕೆಗೆ ಹೆರಿಗೆ ಮಾಡಲಾಗಿದೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇದಾಂತ ಕ್ಲಿನಿಕ್ನಲ್ಲಿ ಜನಿಸಿದ ಮೊದಲ ಮಗು ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL) ಸಣ್ಣ “ಪ್ರಯಾಣಿಕ” ಎಂದು ಮಗುವಿನ ಆಗಮನವನ್ನು ಸ್ವಾಗತಿಸಿತು.
Welcoming the youngest passenger ever!
Celebrating the arrival of the First Baby at Terminal 3, Medanta Facility.
Mother and child, both are doing well.#NewBorn #YoungestPassengeratDEL #DELCares pic.twitter.com/BqHZA4WWno— Delhi Airport (@DelhiAirport) November 15, 2022
BIGG NEWS: ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ: ರಾಮ್ದಾಸ್ ಪರೋಕ್ಷ ಆರೋಪ
ಕೋಲಾರದ ಮಾಲೂರು ಬಳಿ ಭೀಕರ ರಸ್ತೆ ಅಪಘಾತ: 13 ಮಂದಿ ಕೂಲಿ ಕಾರ್ಮಿಕರಿಗೆ ಗಂಭಿರ ಗಾಯ
BIGG NEWS: ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ: ರಾಮ್ದಾಸ್ ಪರೋಕ್ಷ ಆರೋಪ