ವಾಷಿಂಗ್ಟನ್: ಹೆಚ್ಚಾಗಿ ಮದ್ಯ ಸೇವಿಸೋದ್ರಿಂದ ವಯಸ್ಕರಿಗಿಂತ ಯುವಜನತೆ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ.
ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ಜಾಗತಿಕ ಅಧ್ಯಯನದ ಪ್ರಕಾರ, ಹೆಚ್ಚಾಗಿ ಮದ್ಯ ಸೇವನೆ ಮಾಡೋದ್ರಿಂದ 40 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು ವಯಸ್ಕರಿಗಿಂತ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದು ತಿಳಿಸಿದೆ. ಈ ವರದಿಯು ಭೌಗೋಳಿಕ ಪ್ರದೇಶ, ವಯಸ್ಸು, ಲಿಂಗ ಮತ್ತು ವರ್ಷದಿಂದ ಮದ್ಯದ ಅಪಾಯವನ್ನು ವರದಿ ಮಾಡುವ ಮೊದಲ ಅಧ್ಯಯನ ಇದಾಗಿದೆ.
ಜಾಗತಿಕ ಆಲ್ಕೋಹಾಲ್ ಸೇವನೆಯ ಶಿಫಾರಸುಗಳು ವಯಸ್ಸು ಮತ್ತು ಸ್ಥಳವನ್ನು ಆಧರಿಸಿರಬೇಕು ಎಂದು ಅದು ಸೂಚಿಸುತ್ತದೆ. ಇಲ್ಲಿ 15-39 ವರ್ಷ ವಯಸ್ಸಿನ ಪುರುಷರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಗುರಿಪಡಿಸಲಾಗಿದೆ. ಅವರು ವಿಶ್ವಾದ್ಯಂತ ಹಾನಿಕಾರಕ ಆಲ್ಕೊಹಾಲ್ ಸೇವನೆಯ ಅಪಾಯವನ್ನು ಹೊಂದಿರುತ್ತಾರೆ. ಹೀಗಾಗಿ ಅವರು ಆಲ್ಕೋಹಾಲ್ ಸೇವನೆ ಮಾಡದೇ ಅದರಿಂದ ದೂರ ಇರುವುದೇ ಒಳ್ಳೆಯದು. 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಕಡಿಮೆ ಆಲ್ಕೋಹಾಲ್ ಸೇವನೆ ಮಾಡೋದ್ರಿಂದ ಕೆಲವು ಪ್ರಯೋಜನಗಳನ್ನು ಪಡೆಯಬಹುದು. ಅಂದ್ರೆ, ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಒಳಗೊಂಡಿರುತ್ತದೆ.
ಪ್ರತಿ ಪ್ರದೇಶದಲ್ಲಿ, ಅಸುರಕ್ಷಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವ ಜನಸಂಖ್ಯೆಯ ದೊಡ್ಡ ಭಾಗವು 15-39 ವರ್ಷ ವಯಸ್ಸಿನ ಪುರುಷರು ಮತ್ತು ಈ ವಯಸ್ಸಿನವರಿಗೆ, ಮದ್ಯಪಾನವು ಯಾವುದೇ ಆರೋಗ್ಯ ಪ್ರಯೋಜನಗಳನ್ನು ನೀಡುವುದಿಲ್ಲ. ಇದರ ಬದಲಾಗಿ ಅನೇಕ ಆರೋಗ್ಯ ಅಪಾಯಗ ಎದುರಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ವಿಶ್ವದಾದ್ಯಂತ ಸುಮಾರು 60 ಪ್ರತಿಶತದಷ್ಟು ಜನರು ಆಲ್ಕೋಹಾಲ್ ಸೇವನೆ ನಂತ್ರ ಅಮಲಿಗೊಳಗಾಗಿ ಮೋಟಾರು ವಾಹನ ಅಪಘಾತಗಳು, ಆತ್ಮಹತ್ಯೆಗಳು ಮತ್ತು ನರಹತ್ಯೆಗಳು ಸೇರಿದಂತೆ ಇತರೆ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ.
“ನಮ್ಮ ಸಂದೇಶ ಸರಳವಾಗಿದೆ: ಯುವಕರು ಕುಡಿಯಬಾರದು, ಆದರೆ ವಯಸ್ಸಾದವರು ಸಣ್ಣ ಪ್ರಮಾಣದಲ್ಲಿ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು” ಎಂದು ಅಧ್ಯಯನದ ಹಿರಿಯ ಲೇಖಕಿ ಇಮ್ಯಾನುಯೆಲಾ ಗಕಿಡೌ ಹೇಳಿದ್ದಾರೆ.
2020 ರ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಡೇಟಾದಲ್ಲಿ ಆಲ್ಕೊಹಾಲ್ ಸೇವನೆ ಮಾಡುವವರು ಗಾಯಗಳು, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ 22 ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು ಎಂದಿದ್ದಾರೆ. ಇದನ್ನು ಸಂಶೋಧಕರು 204 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 1990 ಮತ್ತು 2020 ರ ನಡುವೆ15-95 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರ ಮೇಲೆ ಅಧ್ಯಯನ ನಡೆಸಿದ್ದಾರೆ.
BIGG NEWS : ರಾಜ್ಯದ ಪ್ರತಿ ತಾಲೂಕಿನಲ್ಲೂ `ಜವಳಿಪಾರ್ಕ್’ ಸ್ಥಾಪನೆ : ಸಿಎಂ ಬಸವರಾಜ ಬೊಮ್ಮಾಯಿ