ಕೆಲವರು ರೀಲ್ಸ್ ಹುಚ್ಚಿಗಾಗಿ ಏನೇನೋ ಕೆಲಸಗಳನ್ನು ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಾರೆ.ರೀಲ್ಸ್ ಹೆಸರಲ್ಲಿ ಯುವ ಸಮುದಾಯ ಮಾಡ್ತಿರೋ ಹುಚ್ಚಾಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಈಗಾಗಲೇ ಈ ರೀಲ್ಸ್ ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಇಂತಹದ್ದೇ ಒಂದು ರೀಲ್ಸ್ ಹುಚ್ಚಿಗೆ ಯುವಕನೊಬ್ಬ ಸ್ಕೂಟರ್ ಸಮೇತ ಸಮುದ್ರಕ್ಕೆ ಇಳಿದಿರುವ ದೃಶ್ಯ ಇದೀಗ ವೈರಲ್ ಆಗಿದೆ.
ಇದು ಎಲ್ಲಿ ಯಾವಾಗ ನಡೆದಿದೆ ಇಂಡಿ ತಿಳಿದುಬಂದಿಲ್ಲ. The Figen ಎನ್ನುವವರು ತಮ್ಮ X ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂದಿದ್ದಾರೆ. ಆದರೆ ಯುವಕನೊಬ್ಬ ಸ್ಕೂಟರ್ ಸಮೇತ ಸಮುದ್ರಕ್ಕೆ ಇಳಿದು ಹುಚ್ಚಾಟ ಮೆರೆದಿದ್ದಾನೆ.ಆದರೆ ವೈರಲ್ ಆಗಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಯುವಕನು ಹೆಲ್ಮೆಟ್ ಹಾಕಿದ್ದು, ತನ್ನ ಸ್ಕೂಟರ್ ಅನ್ನು ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ.
ಎದುರುಗಡೆ ಸಮುದ್ರದ ಅಲೆಗಳು ಬರುತ್ತಿದ್ದರ, ಅದರ ವಿರುದ್ಧವಾಗಿ ಈತ ಸ್ಕೂಟರ್ ಚಲಾಯಿಸಿಕೊಂಡು ಸಮುದ್ರಕ್ಕೆ ಇಳಿದಿದ್ದಾನೆ. ಈ ವೇಳೆ ಸಮುದ್ರದ ಅಲೆಗಳು ಜೋರಾಗಿ ಬಂದಾಗ ಮತ್ತೆ ಸ್ಕೂಟರ್ ತಿರುಗಿಸಿ ವಾಪಸ್ ಬರುವಾಗ ಸ್ಕೂಟರ್ ಕೆಡವಿದ್ದಾನೆ. ನಂತರ ಮತ್ತೆ ಎದ್ದು ಅಲ್ಲಿಂದಲೇ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಸಮುದ್ರ ದಡಕ್ಕೆ ವಾಪಸ್ ಆಗಿದ್ದಾನೆ. ಈತನ ಹುಚ್ಚಾಟ ಕಂಡು ನೆಟ್ಟಿಗರು ಆಕ್ರೋಶವಾಗಿದ್ದು ದಯವಿಟ್ಟು ಯಾರು ಇಂತಹದು ಸಾಹಸಕ್ಕೆ ಕೈ ಹಾಕಬೇಡಿ ಎಂದು ಕಮೆಂಟ್ ಮಾಡಿದ್ದಾರೆ.
When you pay attention to Google Maps.
— Figen (@TheFigen_) July 1, 2024