Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀಟ್ ಪತ್ರಿಕೆ ಸೋರಿಕೆ: ಮಹಾರಾಷ್ಟ್ರದ ವೈದ್ಯ ಸೇರಿದಂತೆ ಐವರ ಬಂಧನ; ಹರಿಯಾಣದಿಂದ ರಾಜಸ್ಥಾನದವರೆಗೆ ಹರಡಿದ್ದ ಜಾಲ!

Viral News : ಸೀರೆ ಇಷ್ಟವಾಗಲಿಲ್ಲವೆಂದು ಮದುವೆಯೇ ಕ್ಯಾನ್ಸಲ್ : ಹಸೆಮಣೆ ಏರಬೇಕಿದ್ದ ಜೋಡಿ ಈಗ ಪೊಲೀಸ್ ಠಾಣೆ ಮೆಟ್ಟಿಲಿಗೆ.!

ತೀವ್ರ ವಿರೋಧಕ್ಕೆ ಮಣಿದ ಸಿಎಂ ವಿಜಯ್: ಜ್ಯೋತಿಷಿ ವೆಟ್ರಿವೇಲ್ ನೇಮಕಾತಿ ಆದೇಶ ರದ್ದು ಮಾಡಿದ ತಮಿಳುನಾಡು ಮುಖ್ಯಮಂತ್ರಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!
KARNATAKA

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

By kannadanewsnow57

ಬೆಂಗಳೂರು: ವಿಕಲಚೇತನರ ಸಬಲೀಕರಣ ಮತ್ತು ಅವರ ಬದುಕಿಗೆ ಆಸರೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗ ಹಾಗೂ ಪುನರ್ವಸತಿ ಕ್ಷೇತ್ರಗಳಲ್ಲಿ ವಿಕಲಚೇತನರಿಗೆ ನೆರವಾಗಲು ರೂಪಿಸಲಾದ ಪ್ರಮುಖ ಯೋಜನೆಗಳ ವಿವರಗಳು ಇಲ್ಲಿವೆ.

ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನ:

ಈ ಯೋಜನೆಯಡಿ ಬುದ್ಧಿಮಾಂದ್ಯ * (ಸೆರಬ್ರಲ್ ಪಾಲ್ಸಿ, ಆಟಿಸಂ), ದೃಷ್ಟಿದೋಷ, ಶ್ರವಣದೋಷವುಳ್ಳ ಮಕ್ಕಳಿಗಾಗಿ ವಸತಿಯುತ ಹಾಗೂ ವಸತಿರಹಿತ ಶಾಲೆಗಳು ಸೇರಿದಂತೆ ಒಟ್ಟು 164 ವಿಶೇಷ ಶಾಲೆಗಳು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುತ್ತಿವೆ. 2022-23ನೇ ಸಾಲಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸುತ್ತಿರುವ ವಿಶೇಷ ಶಾಲೆಗಳ ನಿರ್ವಹಣೆಗೆ ನೀಡಲಾಗುತ್ತಿದ್ದ ಅನುದಾನವನ್ನು ಶೇ.50%ರಷ್ಟು ಹೆಚ್ಚಿಸಿ ಸರ್ಕಾರದ ಆದೇಶ ಸಂಖ್ಯೆ: ಮಮಇ:153:ಪಿಹೆಚ್ಪಿ:2020, ದಿ:14.09.2022 ರಲ್ಲಿ ಆದೇಶಿಸಲಾಗಿದೆ. ಈ ಅನುದಾನದಲ್ಲಿ ಶಿಕ್ಷಕರ ಗೌರವಧನ, ಮಕ್ಕಳ ಆಹಾರ ವೆಚ್ಚ ಕಟ್ಟಡದ ಬಾಡಿಗೆ ಹಾಗೂ ನಿರ್ವಹಣಾ ವೆಚ್ಚ, ಸಮವಸ್ತ್ರ, ವೈದ್ಯಕೀಯ ವೆಚ್ಚ ಹಾಗೂ ಸಾದಿಲ್ವಾರು ವೆಚ್ಚಗಳು ಒಳಗೊಂಡಿರುತ್ತವೆ.

ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹನ ಧನ:

ಈ ಯೋಜನೆಯಡಿ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಆಯಾ ಜಿಲ್ಲಾ ಕಛೇರಿಗಳ ಮೂಲಕ ಆನ್ಲೈನ್ನಲ್ಲಿ ಮಂಜೂರು ಮಾಡಲಾಗುತ್ತಿದೆ. 2001-02ನೇ ಸಾಲಿನಿಂದ ಈ ಯೋಜನೆಯ ಫಲಾನುಭವಿಗಳಿಗೆ ಆದಾಯ ಮಿತಿಯಿಂದ ವಿನಾಯಿತಿಗೊಳಿಸಲಾಗಿದೆ.

ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಯೋಜನೆ:

ಸಾರ್ವತ್ರಿಕ ಪರೀಕ್ಷೆಗಳಲ್ಲಿ ಶೇಕಡ 60ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾನ್ನಿತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿದೆ.

ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ:

ಎಸ್.ಎಸ್.ಎಲ್.ಸಿ ನಂತರದ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ, ಔದ್ಯೋಗಿಕ ಶಿಕ್ಷಣಗಳಿಗೆ ನಿಯಮಾನುಸಾರ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿರುವ ಪರೀಕ್ಷಾ ಶುಲ್ಕ ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಕ್ರೀಡಾ ಶುಲ್ಕ ಹಾಗೂ ಗ್ರಂಥಾಲಯ ಶುಲ್ಕಗಳನ್ನು ಮರುಪಾವತಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಆದಾಯಮಿತಿ ಇರುವುದಿಲ್ಲ.

ಆಧಾರ ಯೋಜನೆ :

ವಿಕಲಚೇತನರು ಸ್ವಯಂ ಉದ್ಯೋಗ ಕೈಗೊಂಡು ಜೀವನ ಸಾಗಿಸಲು ಅನುಕೂಲವಾಗುವಂತೆ ಆಧಾರ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಶೇ.50ರಷ್ಟು ಬ್ಯಾಂಕ್ ಸಾಲ ಮತ್ತು ಶೇ.50ರಷ್ಟು ಸಹಾಯಧನವನ್ನು ಇಲಾಖೆಯಿಂದ ನೀಡಲಾಗುತ್ತದೆ.

ಗ್ರಾಮೀಣ ಪುನರ್ವಸತಿ ಯೋಜನೆ:

ಈ ಯೋಜನೆಯನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳ 176 ತಾಲ್ಲೂಕುಗಳಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎಸ್.ಎಸ್.ಎಲ್.ಸಿ. ಉತ್ತೀರ್ಣ/ ಅನುತ್ತೀರ್ಣರಾದ ಸಮರ್ಥ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಂದು ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸ್ಥಳೀಯ ಸಮರ್ಥ ಪದವೀಧರ ವಿಕಲಚೇತನರೊಬ್ಬರನ್ನು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರೆಂದು, ಸ್ಥಳೀಯ ನಗರ ಪ್ರದೇಶಗಳಲ್ಲಿ ನಗರ ಪುನರ್ವಸತಿ ಕಾರ್ಯಕರ್ತರೆಂದು 03 ಜಿಲ್ಲೆಗಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಯೋಜಕರು ಮತ್ತು ನಿರ್ದೇಶನಾಲಯದಲ್ಲಿ ರಾಜ್ಯ ಸಂಯೋಜಕರನ್ನು ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ. ಈ ಕಾರ್ಯಕರ್ತರ ಮೂಲಕ ವಿಕಲಚೇತನರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ಅವರಿರುವ ಸ್ಥಳಗಳಲ್ಲಿಯೇ ತಲುಪಿಸಲಾಗುವುದು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಗೌರವಧನವನ್ನು ರೂ.6000/- ದಿಂದ 9000/-ಗಳಿಗೆ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ 12000/- ದಿಂದ 15000/-ಗಳಿಗೆ ಹೆಚ್ಚಿಸಲಾಗಿದೆ. ನಗರ ಪುನರ್ವಸತಿ ಕಾರ್ಯಕರ್ತರಿಗೆ ರೂ. 10000/-ಗೌರವಧನ ನೀಡಲಾಗುತ್ತಿದೆ.

ಜಿಲ್ಲಾ ಸಂಯೋಜಕರಿಗೆ ನೀಡಲಾಗುತ್ತಿದ್ದ ಗೌರವಧನ ರೂ.13,000/-ಗಳಿಂದ ರೂ.19,000/-ಗಳಿಗೆ ಹಾಗೂ ರಾಜ: ಸಂಯೋಜಕರಿಗೆ ನೀಡಲಾಗುತ್ತಿದ್ದ ಗೌರವಧನ ರೂ.26,000/-ಗಳಿಂದ ರೂ.38,000/-ಗಳಿಗೆ

ದೃಷ್ಟಿದೋಷವುಳ್ಳ ವ್ಯಕ್ತಿಗಳಿಗೆ ಬೈಲ್ ಕಿಟ್:

ಅಂಧ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ರಾಜ್ಯದ 500 ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್. ಬ್ರೆಲ್ ವಾಚ್. ವಾಕಿಂಗ್ ಸ್ಟಿಕ್ ಮತ್ತು ಇನ್ನಿತರೆ ಸಾಧನಗಳನ್ನು ಒಳಗೊಂಡ ಖರೀದಿಸಿ ವಿತರಿಸಲಾಗುತ್ತಿದೆ.

ಬ್ಯಾಟರಿ ಚಾಲಿತ ವೀಲ್ ಚೇರ್ಗಳನ್ನು ವಿತರಿಸುವ ಯೋಜನೆ:

2023-24ನೇ ಸಾಲಿನಿಂದ ಬ್ಯಾಟರಿ ಚಾಲಿತ ವೀಲ್ ಚೇರ್ಗಳನ್ನು ವಿಕಲಚೇತನರಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಿಲ್ ಚೇರ್ಗಳನ್ನು ವಿತರಿಸಲಾಗುತ್ತಿದೆ.

ಅಂಗವಿಕಲತೆಯನ್ನು ನಿವಾರಿಸುವ ಶಸ್ತ್ರಚಿಕಿತ್ಸೆಗಾಗಿ ವೈದ್ಯಕೀಯ ಪರಿಹಾರ ನಿಧಿ ಯೋಜನೆ:-

ಅಂಗವಿಕಲ ವ್ಯಕ್ತಿಗಳಿಗೆ ಅಂಗವಿಕಲತೆಯನ್ನು ನಿವಾರಿಸಲು ಶಸ್ತ್ರ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ . ಸಂಜಯಗಾಧಿ ಆಸ್ಪತ್ರೆಗಳಲ್ಲಿ ಹಾಗೂ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಅಂಗವಿಕಲತೆ ನಿವಾರಣಾ ಶಸ್ತ್ರ ಚಿಕಿತ್ಸೆಗಾಗಿ ರೂ.1.00 ಲಕ್ಷಗಳವರೆಗೆ ಸಹಾಯ ಧನವನ್ನು ಮಂಜೂರು ಮಾಡಲಾಗುತ್ತಿದೆ.

ಸಾಧನೆ ಮತ್ತು ಪ್ರತಿಭೆ ಯೋಜನೆ:

ವಿಕಲಚೇತನರು ನೀಡುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಧನಸಹಾಯ ನೀಡುವ ಸಲುವಾಗಿ “ಪ್ರತಿಭೆ” ಎಂಬ ಯೋಜನೆಯನ್ನು ಹಾಗೂ ಅಂಗವಿಕಲ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಧನಸಹಾಯ ನೀಡಲು “ಸಾಧನೆ” ಎಂಬ ಯೋಜನೆಯು ಜಾರಿಯಲ್ಲಿದ್ದು ಕ್ರೀಡೆಗಳಲ್ಲಿ ವಿಶೇಷ ಸಾಧನೆಗೈದ ವಿಕಲಚೇತನರಿಗೆ ರೂ.50,000/-ಗಳ ಧನ ಸಹಾಯವನ್ನು ನೀಡಲಾಗುತ್ತಿದೆ.

ನಿರಾಮಯ ಆರೋಗ್ಯ ವಿಮಾ ಯೋಜನೆ : (ಆಟಿಸಂ, ಸೆರೆಬ್ರಲ್ ಪಾಲ್ಸಿ, ಬೌದ್ಧಿಕ ಅಂಗವಿಕಲತೆ ಮತ್ತು ಬಹುವಿಧ ಅಂಗವಿಕಲತೆ)

ಬುದ್ಧಿಮಾಂದ್ಯ, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲತೆಗೆ ಒಳಗಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿಕಲಚೇತನರಿಗೆ ನಿರಾಮಯ ಎಂಬ ಆರೋಗ್ಯ ವಿಮಾ ಯೋಜನೆಯು ಜಾರಿಯಲ್ಲಿದ್ದು ಮೇಲೆ ವಿವರಿಸಿದ ಅಂಗವಿಕಲತೆ ಹೊಂದಿರುವ ಪ್ರತಿ ವ್ಯಕ್ತಿಗೆ ವರ್ಷಕ್ಕೆ ಒಂದು ಬಾರಿಗೆ ಪ್ರೀಮಿಯಂ ಮೊತ್ತ ರೂ.250/-ಗಳನ್ನು ನ್ಯಾಷನಲ್ ಟ್ರಸ್ಟ್ ಸಂಸ್ಥೆಗೆ ಪಾವತಿಸಲಾಗುವುದು. ಪ್ರತಿ ವರ್ಷ ಯೋಜನೆಯಡಿ ಬರುವ ಫಲಾನುಭವಿಗಳು ರೂ.1.00 ಲಕ್ಷಗಳವರೆಗೆ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿರುತ್ತದೆ.

ಆರೈಕೆದಾರರ ಭತ್ಯೆ/ಪ್ರೋತ್ಸಾಹ ಧನ:

Cerebral Palsy. Muscular Dystrophy. Parkinsons , Multiple Sclerosis ಬಳಲುತ್ತಿರುವ ವ್ಯಕ್ತಿಗಳು ಹಾಗೂ ವಿಶೇಷ ಚೇತನ ಮಕ್ಕಳನ್ನೂ ಒಳಗೊಂಡಂತೆ ಆತ್ಮಕ ಮಾಡುತ್ತಿರುವವರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹ ಧನ ನೀಡುವ ಯೋಜನೆಯಾಗಿದ. 2025-26ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಯವರ ಆಯವ್ಯಯ ಭಾಷಣದಲ್ಲಿ ಈ ಆರೈಕೆದಾರರ ಭತ್ಯೆಯನ್ನು ಭೌದ್ಧಿಕ ವಿಕಲತೆ, ಬಹುವಿಧ ಅಂಗವಿಕಲತೆ (ಡಬ್ಲೆಂಡ್). ಆಟಿಸಂ ವಿಕಲತೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಆರೈಕೆ ಮಾಡುತ್ತಿರುವ ಆರೈಕೆದಾರರಿಗೂ ವಿಸ್ತರಿಸಲಾಗಿದೆ.

ನಿರಾಶ್ರಿತ ಭೌದ್ಧಿಕ ವಿಕಲಚೇತನರ ಅನುಪಾಲನಾ ಗೃಹ: ನಿರಾಶ್ರಿತ ಭೌದ್ಧಿಕ ವಿಕಲಚೇತನರ ಆರೈಕ

ಮತ್ತು ಸಂರಕ್ಷಣೆಗಾಗಿ 4 ಅನುಪಾಲನಾ ಗೃಹಗಳನ್ನು ಬೆಂಗಳೂರು ನಗರ, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳಲ್ಲಿ ಇಲಾಖೆಯಿಂದ ಪ್ರಾರಂಭಿಸಲುದ್ದೇಶಿಸಲಾಗಿದ್ದು, ಈಗಾಗಲೇ ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಹಾಗೂ ಕಲಬುರಗಿ ವಿಭಾಗಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು ಉಳಿದ ವಿಭಾಗಗಳಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

You will get all these facilities from the government for the disabled in the state!
Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

1 Min Read

ಗ್ರಾಹಕರೇ ಗಮನಿಸಿ : LPG, CNG, PNG, LNG ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

2 Mins Read

Rain Alert : ರಾಜ್ಯದಲ್ಲಿ ಇಂದು, ನಾಳೆ `ಆಲಿಕಲ್ಲು ಮಳೆ’ : ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

1 Min Read
Recent News

ನೀಟ್ ಪತ್ರಿಕೆ ಸೋರಿಕೆ: ಮಹಾರಾಷ್ಟ್ರದ ವೈದ್ಯ ಸೇರಿದಂತೆ ಐವರ ಬಂಧನ; ಹರಿಯಾಣದಿಂದ ರಾಜಸ್ಥಾನದವರೆಗೆ ಹರಡಿದ್ದ ಜಾಲ!

Viral News : ಸೀರೆ ಇಷ್ಟವಾಗಲಿಲ್ಲವೆಂದು ಮದುವೆಯೇ ಕ್ಯಾನ್ಸಲ್ : ಹಸೆಮಣೆ ಏರಬೇಕಿದ್ದ ಜೋಡಿ ಈಗ ಪೊಲೀಸ್ ಠಾಣೆ ಮೆಟ್ಟಿಲಿಗೆ.!

ತೀವ್ರ ವಿರೋಧಕ್ಕೆ ಮಣಿದ ಸಿಎಂ ವಿಜಯ್: ಜ್ಯೋತಿಷಿ ವೆಟ್ರಿವೇಲ್ ನೇಮಕಾತಿ ಆದೇಶ ರದ್ದು ಮಾಡಿದ ತಮಿಳುನಾಡು ಮುಖ್ಯಮಂತ್ರಿ

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

State News
KARNATAKA

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

By kannadanewsnow57 KARNATAKA 1 Min Read

ಬೇಸಿಗೆಯ ಬಿಸಿಲಿನ ತಾಪದಿಂದ ಪಾರಾಗಲು ನಾವು ಎಸಿ (AC) ಮತ್ತು ಏರ್ ಕೂಲರ್ಗಳನ್ನು ನಿರಂತರವಾಗಿ ಬಳಸುತ್ತೇವೆ. ಆದರೆ, ಕೇವಲ ಈ…

ಗ್ರಾಹಕರೇ ಗಮನಿಸಿ : LPG, CNG, PNG, LNG ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Rain Alert : ರಾಜ್ಯದಲ್ಲಿ ಇಂದು, ನಾಳೆ `ಆಲಿಕಲ್ಲು ಮಳೆ’ : ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರೈಲು ಪ್ರಯಾಣಿಕರೇ ಗಮನಿಸಿ : ರೈಲಿನ ಟಿಕೆಟ್ ಕನ್ಫರ್ಮ್ ಆಗುತ್ತೋ ಇಲ್ಲವೋ ಎಂದು ಬುಕ್ಕಿಂಗ್‌ಗೂ ಮುನ್ನವೇ ಹೇಳುತ್ತೆ ಈ ಆಪ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.