ಬೆಂಗಳೂರು : ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್‌ನಿಂದ ಹೊರಬಿದ್ದಿದ್ದಾರೆ. 50 ಕೆಜಿ ವಿಭಾಗದ ಫೈನಲ್‌ಗೆ ತಲುಪಿದ್ದ ವಿನೇಶ್ ಫೋಗಟ್, ಪ್ರಶಸ್ತಿ ಪಂದ್ಯಕ್ಕೂ ಮುನ್ನ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಅವರನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗಿದೆ. ಈ ಕ್ರಮದ ನಂತರ ಇಡೀ ದೇಶ ವಿನೇಶ್ ಜೊತೆ ನಿಂತಿದೆ.
ಹೌದು ವಿನೇಶ್ ಪೊಗಟ್ ಅನರ್ಹತೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ, ಪ್ಯಾರಿಸ್ ಒಲಂಪಿಕ್ಸ್‌ನ ದುರದೃಷ್ಟಕರ. ಘಟನೆಯ ನಂತರ ನನ್ನ ಹೃದಯ ಭಾರವಾಗಿದೆ. ವಿನೇಶ್ ಪೊಗಟ್ ನಿಮ್ಮ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸಮರ್ಪಣೆ ಯಾವಾಗಲೂ ರಾಷ್ಟ್ರವನ್ನು ಪ್ರೇರೇಪಿಸುತ್ತದೆ.
ನೆನಪಿಡಿ, ಈ ಕ್ಷಣವು ನಿಮ್ಮ ಲೆಕ್ಕವಿಲ್ಲದಷ್ಟು ಸಾಧನೆಗಳನ್ನು ಮತ್ತು ನೀವು ಭಾರತಕ್ಕೆ ತಂದ ಹೆಮ್ಮೆಯನ್ನು ಕಡಿಮೆ ಮಾಡುವುದಿಲ್ಲ. ವಿನೇಶ್ ನೀವು ಬಲವಾಗಿ ಸದೃಢವಾಗಿರಿ. ನಾವು ನಿಮ್ಮನ್ನು ಮತ್ತು ನಿಮ್ಮ ಅದ್ಭುತ ಪ್ರಯಾಣವನ್ನು ನಂಬುತ್ತೇವೆ. ನೀವು ಯಾವಾಗಲೂ ನಮ್ಮ ಚಾಂಪಿಯನ್ ಆಗಿರುತ್ತೀರಿ! ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
My heart goes out to @Phogat_Vinesh after the unfortunate incident from the Paris Olympics. Your strength, resilience, and dedication have always inspired the nation.
Remember, this moment does not diminish your countless achievements and the pride you have brought to India.… pic.twitter.com/TwGobN1ygK
— Siddaramaiah (@siddaramaiah) August 7, 2024