ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ವಿದ್ಯೆ ಹೇಳುವ ಗುರುಗಳು ಎನಿಸಿಕೊಂಡವರು ಹೇಸಿಗೆಯ ಕೃತ್ಯ ಎಸಗುತ್ತಿದ್ದೂ, ಇದೀಗ ದಾವಣಗೆರೆಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ನೀನು ಮದುವೆ ಆಗು ಆದರೆ ನನ್ನ ಜೊತೆ ಡೇಟಿಂಗ್ ಮಾಡು ಎಂದು ಅಶ್ಲೀಲವಾಗಿ ಮೆಸೇಜ್ ಕಳುಹಿಸಿರುವ ಘಟನೆ ವರದಿಯಾಗಿದೆ.
ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಲಿಂಗೇಶ್ವರಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿರುವ ಮುರುಳಿ ಎಂಬಾತ ಬಿಎಸ್ಸಿ ವಿಭಾಗದ ವಿದ್ಯಾರ್ಥಿನಿಗೆ ಕಾಲ್ ಹಾಗೂ ಮೆಸೇಜ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಮುರುಳಿಯು ವಿದ್ಯಾರ್ಥಿನಿಗೆ ಐ ಲವ್ ಯು ಎಂದು ಮೆಸ್ಸೇಜ್ ಮಾಡಿದ್ದಲ್ಲದೆ, ವಿದ್ಯಾರ್ಥಿನಿ ನನಗೆ ಮಾಡುವೆ ಫಿಕ್ಸ್ ಆಗಿದೆ ಎಂದು ಹೇಳಿದರೂ ಕೂಡ ಅವನನ್ನು ಮದುವೆಯಾಗು ನನ್ನ ಜೊತೆ ಡೇಟಿಂಗ್ ಮಾಡು ಎಂದು ಪೀಡಿಸಿದ್ದಾನೆ.ಅಲ್ಲದೇ ಡೇಟಿಂಗ್ ಅಂದ್ರೆ ಏನು ಕೇಳಿದ್ದಕ್ಕೆ ಮದುವೆ ಆಗ್ತಿಯಾ ಅಲ್ವಾ ನಿನಗೆ ಗೊತ್ತಾಗುತ್ತೆ ಎಂದು ಅಸಭ್ಯವಾಗಿ ಮೆಸ್ಸೇಜ್ ಮಾಡಿದ್ದಾನೆ.
ಆರೋಪಿ ಶಿಕ್ಷಕನ ಈ ಒಂದು ದುರ್ವರ್ತನೆಯಿಂದ ಬೇಸತ್ತು ವಿದ್ಯಾರ್ಥಿಗಳು ಶಿಕ್ಷಕನ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳುವಂತೆ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.ಅತಿಥಿ ಉಪನ್ಯಾಸಕನ ವಿರುದ್ದ ವಿದ್ಯಾರ್ಥಿಗಳು ಚೆನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕ್ರಮಕ್ಕೆ ಅಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.