ಮಂಡ್ಯ : ಸ್ವಾಭಿಮಾನ, ಗೌರವದ ವಿಚಾರದಲ್ಲಿ ಮಂಡ್ಯ ಜಿಲ್ಲೆ ರಾಜ್ಯಕ್ಕೆ ಮಾದರಿ. ಜನತಾ ಪಕ್ಷವನ್ನ ನಿನ್ನೆಯೇ ಅಂತಿಮಗೊಳಿಸಿದ್ದೀರಿ.ನಿನ್ನೆ ಕೇಸರಿ ಶಾಲು ಹಾಕೊಂಡು ಪಕ್ಷದ ಅಂತಿಮ ಯಾತ್ರೆಗೆ ತಿಲಾಂಜಲಿ ಹಾಡಿದ್ದೀರ. ಇಷ್ಟು ದಿನ ಹಸಿರು ಶಾಲು ಹಾಕೊಂಡು ಹೋರಾಟ ಮಾಡುತ್ತಿದ್ರಿ.ನೀವು ಪಕ್ಷ ಸೇರ್ಪಡೆ ಆಗಿದ್ದರೆ ಜನತಾ ಪರಿವಾರದವರಿಗೆ ನೋವಾಗುತ್ತಿರಲಿಲ್ಲ.ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ತಮ್ಮ ರಾಜಕೀಯಕ್ಕಾಗಿ ಜಯಪ್ರಕಾಶ್ ನಾರಾಯಣರ ಹೋರಾಟಕ್ಕೆ ತಿಲಾಂಜಲಿ ಹಾಡೀದ್ದೀರಿ ಎಂದು ಸಚಿವ ಚೆಲುವರಾಯಸ್ವಾಮಿ HD ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಬೇಡಿಕೆ ಏನು? ರಾಷ್ಟ್ರ ಧ್ವಜ ಕೆಳಗೆ ಇಳಿಸಬೇಕ? ಈ ಬಗ್ಗೆ ಸ್ಪಷ್ಟನೆ ಕೊಡಬೇಕು.ಸರ್ಕಾರ, ಜಿಲ್ಲಾಡಳಿತ ಕಾನೂನುಬದ್ಧವಾಗಿ ಏನು ಮಾಡಬೇಕೋ ಮಾಡಿದೆ. ನಿಮ್ಮ ಹೋರಾಟ ನೋಡಿದ್ರೆ ರಾಷ್ಟ್ರ ಧ್ವಜ ಇಳಿಸಬೇಕು ಅಂತಿದೆ. ಮೊನ್ನೆ ವಿರೋಧ ಪಕ್ಷದ ನಾಯಕರು ಬಂದು ಹೋಗಿದ್ದಾರೆ. ಸಾಕು ನಿಮ್ಮ ಹೋರಾಟ ಇರಲಿ. ಪ್ರಜಾಪ್ರಭುತ್ವ, ಸಂವಿಧಾನದ ವಿಚಾರದಲ್ಲಿ ಹೋರಾಟ ಬೇಡ. ಉದ್ದಕ್ಕೂ ಜಿಲ್ಲೆಯ ಜನರನ್ನ ಪ್ರವೋಕ್ ಮಾಡಿದ್ದೀರ.ಯುವಕರಿಗೆ ಪ್ರಚೋದನೆ ಮಾಡಿದ್ದೀರಿ ಎಂದು ಕಿಡಿ ಕಾರಿದರು.
ಫ್ಲೆಕ್ಸ್ ಮತ್ತು ಕುರುಬ ಸಮುದಾಯದ ಹಾಸ್ಟೆಲ್ ಗೆ ಕಲ್ಲು ಹೊಡೆಯೋದು ನಿಮ್ಮ ಬದ್ಧತೆಯ? ನಾವು ಸೋತಾಗ ಸುಮ್ಮನೇ ಇರಲಿಲ್ಲವ? 8 ತಿಂಗಳಿಗೆ ನಿಮಗೆ ಸಹಿಸೋಕೆ ಆಗ್ತಿಲ್ಲವ? ಐದು ವರ್ಷದಲ್ಲಿ ಈ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ರಾಷ್ಟ್ರೀಯ ಹೆದ್ದಾರಿ ಅಧ್ವಾನ, ಸರಣಿ ಅಪಘಾತಗಳ ಮಾತಾಡಿಲ್ಲ. ರಾಷ್ಟ್ರ ಧ್ವಜ ಹಾಕಿದ್ದು ತಪ್ಪು ಅನ್ನೋ ನಿರ್ಧಾರಕ್ಕೆ ಬಂದಿದ್ದೀರ? ಮೊದಲ ಬಾರಿಗೆ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ರಾಷ್ಟ್ರ ಧ್ವಜದ ವಿರುದ್ಧ ಹೋರಾಟ ಮಾಡ್ತೀರ? ಎರಡು ಬಾರಿ ಸಿಎಂ ಆಗಲು ಮಂಡ್ಯ ಜಿಲ್ಲೆ ಕಾರಣ.ನಿಮ್ಮ ಆತ್ಮ ಸಾಕ್ಷಿ ಮುಟ್ಟಿಕೊಂಡು ಹೇಳಿ.ಈ ಪಕ್ಷ ಸುಟ್ಟೋಗುತ್ತೆ ಅಂತಾರೆ.ಬಿಜೆಪಿ, ಜೆಡಿಎಸ್ ಏನಾಗುತ್ತೆ ನೋಡಿ.ಈ ಜಿಲ್ಲೆಯ ಜನರ ಮನಪರಿವರ್ತನೆ ಮಾಡಲು ಸಾಧ್ಯವಿಲ್ಲ.
ಮಂಡ್ಯ ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಒಮ್ಮೆ ನಿಮ್ಮನ್ನ ಸಂಪೂರ್ಣ ಗೆಲ್ಲಿಸಿದ್ದಾರೆ. ಮತ್ತೊಮ್ಮೆ ಸೋಲಿಸಿ, ನಮ್ಮನ್ನ ಗೆಲ್ಲಿಸಿದ್ದಾರೆ.ಇಂತಹ ವಿಚಾರ ಮುಂದಿಟ್ಟುಕೊಂಡು ಜನರ ಮನಸ್ಸು ಬದಲಿಸಲು ಆಗಲ್ಲ.ಈ ವಿಚಾರ ನಿಮಗೆ ಶೋಭೆ ತರಲ್ಲ. ನೀವೊಬ್ಬ ಮಾಜಿ ಪ್ರಧಾನಿ ಮಗ. ಮೊನ್ನೆ ಬೆಂಗಳೂರಿನಲ್ಲಿ ಸಿಕ್ಕಿದ್ರು.ಚಲುವರಾಯಸ್ವಾಮಿ ಯಾರ ಹಣೆಬರಹ ಯಾರೂ ಬದಲಿಸಲು ಸಾಧ್ಯವಿಲ್ಲ. ನಿನ್ನ ಕೆಲಸ ನೀನು ಮಾಡು ಅಂತ ಸಲಹೆ ನೀಡಿದ್ರು. ಹೆಚ್ಡಿಕೆ ಅವರ ಈ ಹಿಂದಿನ ಬಿಜೆಪಿ, RSS ವಿರುದ್ಧದ ಹೇಳಿಕೆ, ಟ್ವೀಟ್ ಪ್ರದರ್ಶಿಸಿ ವಾಗ್ದಾಳಿ ನಡೆಸಿದರು.
ಕೆರಗೋಡು ಗ್ರಾಮದ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ
ಕೆರಗೋಡು ಗ್ರಾಮದ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ.ಆ ಗ್ರಾಮದವರ ಯಾರ ಪಾತ್ರವೂ ಇದರಲ್ಲಿ ಇಲ್ಲ. ಹೆಚ್ಡಿಕೆ, ಅಶೋಕ್, ಸಿ.ಟಿ.ರವಿ ಅಂತಹವರು ಇದನ್ನ ಮಾಡಿಸಿರಬಹುದು.ಕುಮಾರಸ್ವಾಮಿ ಅವರು ಸಿಎಂ ಆಗಿದ್ದರೆ ಏನು ಮಾಡ್ತಿದ್ದರು ಹೇಳ್ಬೇಕು.ರಾಷ್ಟ್ರ ಧ್ವಜ ಹಾರಿಸಿದ್ದು ಅಪರಾಧನ? ರಾಷ್ಟ್ರಕ್ಕೆ ಸಲ್ಲಿಸಿದ ಗೌರವ ಅಲ್ವ? ಜನರ ನೆಮ್ಮದಿ ಕೆಡಿಸುವ ವಾತಾವರಣ ನಿರ್ಮಾಣ ಮಾಡಿರೋದನ್ನ ಜಿಲ್ಲೆಯ ಜನ ಸಹಿಸಲ್ಲ.ಮತ್ತೆ ಈ ಜಿಲ್ಲೆಯ ಜನರನ್ನ ಸುಳ್ಳು ಹೇಳಿ, ಧರ್ಮದ ಹೆಸರಲ್ಲಿ ನಂಬಿಸುವ ಭ್ರಮೆಯಿಂದ ಹೊರ ಬನ್ನಿ.ಸಾಕಷ್ಟು ಹಿರಿಯರು ಸೋತಿದ್ದಾರೆ.ಸಾವಿರಾರು ಎಕರೆ ಸರ್ಕಾರಿ ಆಸ್ತಿ ಉಳ್ಳವರಿಗೆ ಮಾಡಿಕೊಟ್ಟ ಕೀರ್ತಿ ನಿಮ್ಮ ಸರ್ಕಾರದ್ದು.ಹೈವೇ, ಕಾವೇರಿ, ಮೈಶುಗರ್, ಜಿಲ್ಲೆಯ ಸಮಸ್ಯೆ ಬಗ್ಗೆ ಹೋರಾಟ, ಚರ್ಚೆ ಮಾಡಲಿಲ್ಲ.
ಪ್ರಧಾನಿ ಹತ್ತಿರ ಹೋಗಿ ಫೋಟೋ ತೆಗೆಸ್ತೀರಲ್ಲ.ಬರಗಾಲದ ಹಣ ಬಿಡುಗಡೆ ಬಗ್ಗೆ ಯಾಕೆ ಕೇಳಲಿಲ್ಲ. ಈ ಜಿಲ್ಲೆಯ ಜನರ ಬಾಳಲ್ಲಿ ಬೆಂಕಿ ಹಚ್ಚಲು ಬಂದಿದ್ದೀರಿ? ಕುಮಾರಸ್ವಾಮಿ ಅವರೇ ನಿಮ್ಮನ್ನ ಈ ಜಿಲ್ಲೆಯ ಜನ ಸಹಿಸಲ್ಲ. ಕೇಸರಿ ಶಾಲು ಹಾಕಿ ಆಗಿದೆ. ಅವಶ್ಯಕತೆ ಇದ್ದರೇ ಬಿಜೆಪಿ ಸೇರ್ಪಡೆ ಆಗಿ.ಆದರೆ ಮತ್ತೆ ಇಂತಹ ಕೀಳು ಮಟ್ಟದ ಹೋರಾಟ ಬೇಡ.ಜಿಲ್ಲೆಯ ಜನರ ಬದುಕಿನಲ್ಲಿ ಆಟವಾಡೋದು ಬೇಡ. ಇವರ ಸುಳ್ಳು, ಪ್ರಚೋದನೆಗೆ ಕಿವಿಗೊಡಬೇಡಿ.ನಾವು ಮೈಶುಗರ್ ಆರಂಭ ಮಾಡಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಬದ್ಧರಿದ್ದೇವೆ.ಏನೇ ವಿಷಯ, ಸಮಸ್ಯೆ ಇದ್ದರೂ ಮುಕ್ತವಾಗಿ ಚರ್ಚೆ ಮಾಡೋಣ ಬನ್ನಿ. ಸದಾ ಜಿಲ್ಲೆಯ ಜನರ ಪರ ನಾವು ಇರ್ತೇವೆ ಎಂದು ಜಿಲ್ಲೆಯ ಜನರಲ್ಲಿ ಸಚಿವ ಚೆಲುವರಾಯ ಸ್ವಾಮಿ ಮನವಿ ಮಾಡಿದರು.