ಏಲಕ್ಕಿ ಸಿಹಿ ಪದಾರ್ಥಗಳಲ್ಲಿ ಹೆಚ್ಚು ಬಳಸುತ್ತಾರೆ. ಇದು ಅತ್ಯಂತ ದುಬಾರಿ ಸಾಂಬಾರ್ ಪದಾರ್ಥಗಳಲ್ಲಿ ಒಂದಾಗಿದೆ. ಇದರ ಸೇವನೆಯಿಂದ ಚರ್ಮ ಹಾಗು ಕೂದಲಿನ ಆರೈಕೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಏಲಕ್ಕಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಉರಿಯೂತ ಶಮನ ಮಾಡುವ ಶಕ್ತಿ ಇದಕ್ಕಿದೆ. ಏಲಕ್ಕಿ ಸೇವನೆ ದೇಹಕ್ಕೆ ತಂಪು ಒದಗಿಸುತ್ತದೆ. ಏಲಕ್ಕಿಯಲ್ಲಿ ಸಾರಭೂತ ಗುಣವಿದ್ದು, ಇದು ಜಿಡ್ಡು ಚರ್ಮ ಹೋಗಲಾಡಿಸಲು ರಾಮಬಾಣ. ಹಾಗು ಚರ್ಮದ ಮೇಲಿನ ಮೊಡವೆ, ಕಪ್ಪು ಕಲೆಗಳನ್ನು ನಿವಾರಣೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.
ಏಲಕ್ಕಿಯಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿಯನ್ನು ನಿವಾರಣೆ ಮಾಡುತ್ತದೆ. ಏಲಕ್ಕಿಯನ್ನು ಪ್ಯಾಕ್ ರೂಪದಲ್ಲೂ ಉಪಯೋಗಿಸಬಹುದು.
ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬರೆಸಿ ಮುಖಕ್ಕೆ ಪ್ಯಾಕ್ ರೂಪದಲ್ಲಿ ಹಚ್ಚಿಕೊಳ್ಳಬಹುದು. ಇನ್ನು ಏಲಕ್ಕಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಮೊಡವೆ ಅಥವಾ ಕಲೆ ಇದ್ದ ಜಾಗಕ್ಕೆ ಮಾತ್ರ ಹಚ್ಚಿ ಹತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ. ಏಲಕ್ಕಿಯನ್ನು ನಿಯಮಿತವಾಗಿ ಸೇವಿಸಿದರೆ ತ್ವಚೆಯ ಎಲ್ಲಾ ಸಮ್ಯೆಗಳು ನಿವಾರಣೆಯಾಗುತ್ತದೆ.
ಏಲಕ್ಕಿ ಸೇವನೆ ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತದೆ. ಇದು ಚರ್ಮಕ್ಕೆ ತಾಜಾತನ ನೀಡುತ್ತದೆ. ಏಲಕ್ಕಿಯಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಶಾಶ್ವತವಾಗಿ ನಿವಾರಣೆ ಮಾಡುತ್ತದೆ. ನೀರಿಗೆ ಏಲಕ್ಕಿ ಸೇರಿಸಿ ತಲೆಸ್ನಾನ ಮಾಡಿದರೆ ಕೂದಲು ರೇಷ್ಮೆಯಂತೆ ಹೊಳೆಯುತ್ತದೆ ಹಾಗು ತಲೆ ಹೊಟ್ಟು ನಿವಾರಣೆ ಆಗುತ್ತದೆ.