ಬೆಂಗಳೂರು : ಸಮಾಜದಲ್ಲಿ ಕೋಮು ಬಿತ್ತಿ, ಬಡವರ ವಿರೋಧಿಯಾಗಿರುವ ಬಿಜೆಪಿ ಬಡವರ ದ್ರೋಹಿ ಮತ್ತು ಸಾಮಾಜಿಕ ನ್ಯಾಯದ ವಿರೋಧಿ ಪಕ್ಷ. ನೀವು ದೇಶ ಪ್ರೇಮಿಗಳಲ್ಲ. ದ್ವೇಷದ ಪ್ರೇಮಿಗಳು ಎಂದು ಬಿಜೆಪಿ ಸದಸ್ಯರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.
BREAKING : ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ : ಪಾರ್ಟಿ ಕೊಡಿಸುವ ನೆಪದಲ್ಲಿ ಕೊಲೆ
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ತಂದು ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿಯವರಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಸ್ವಾತಂತ್ರ್ಯಹೋರಾಟ ಉತ್ತುಂಗದಲ್ಲಿದ್ದಾಗ ಬಿಜೆಪಿಯ ಕಡೆಯವರು ಬ್ರಿಟಿಷರ ಜೊತೆ ಶಾಮೀಲಾಗಿದ್ದರು. ನಿಮಗೆ ಯಾವುದೇ ನೈತಿಕತೆ ಇಲ್ಲ. ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಿರಾ. ದಾಡಿ ಬಿಟ್ಟವರು, ಟೋಪಿ, ಬುರ್ಖಾ ಧರಿಸಿದವರನ್ನು ಬರಬೇಡಿ ಎನ್ನುತ್ತೀರಾ ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ಗಾಲಿ ಕುರ್ಚಿ ನೀಡದೆ ಪ್ರಯಾಣಿಕನ ಸಾವಿಗೆ ಕಾರಣವಾದ ‘ಏರ್ ಇಂಡಿಯಾ’ಗೆ 30 ಲಕ್ಷ ರೂ. ದಂಡ ವಿಧಿಸಿದ DGCA
ಸುಳ್ಳು ಹೇಳಲು ಇತಿ ಮಿತಿ ಇಲ್ಲ. ಸುಳ್ಳೇ ನಿಮ್ಮನೆ ದೇವ್ರು. ನಿಮಗೆ ಒಮ್ಮೆಯು ರಾಜ್ಯದ ಜನ ಆಶೀರ್ವಾದ ಮಾಡಿಲ್ಲ. ಅಡ್ಡದಾರಿಯಿಂದ ಸರ್ಕಾರ ರಚನೆ ಮಾಡಿದ್ದಿರಾ. ಇನ್ನು ಮುಂದೆಯು ನಿಮಗೆ ಇದೆ ಗತಿಯಾಗುತ್ತದೆ. ನಿಮ್ಮದು ಕಾಂಗ್ರೆಸ್ ಮುಕ್ತಗೊಳಿಸುವ ಕನಸಾದರೇ, ನಮ್ಮದು ರಾಜ್ಯವನ್ನು ಹಸಿವು ಮುಕ್ತ ಮಾಡುವ ಧ್ಯೇಯ ಎಂದು ಬಿಜೆಪಿ ಸದಸ್ಯರ ವಿರುದ್ಧ ಕಿಡಿ ಕಾರಿದರು.
BREAKING : ಕಲಬುರ್ಗಿಯಲ್ಲಿ ‘ಬಿಜೆಪಿ’ ಮುಖಂಡನ ಭೀಕರ ಹತ್ಯೆ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು